ಉಜಿರೆ: ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ. ಬಿ. ಎಸ್. ಇ) ಯಲ್ಲಿ ಇತ್ತೀಚೆಗೆ ಕಲಾ ಸಿಂಧು ಸಾಂಸ್ಕೃತಿಕ ಸಂಘದ ವತಿಯಿಂದ ‘ಆಟಿದ ಮಿನದನ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ತಿನಿಸುಗಳಾದ ಹಲಸಿನ ಹಣ್ಣಿನ ತಿನಿಸುಗಳು, ಶಾವಿಗೆ, ಹಪ್ಪಳ, ಕಡುಬು, ಅರಶಿನ ಎಲೆಯ ಕಡುಬು ಮುಂತಾದ ತಿನಿಸುಗಳನ್ನು ತಂದು ಅವುಗಳ ಕುರಿತಾದ ಮಾಹಿತಿ ನೀಡಿ, ಇತರರೊಂದಿಗೆ ಹಂಚಿ ಸವಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಸುಮಾ ಶ್ರೀನಾಥ್ ಆಯೋಜಿಸಿದ್ದರು.