ಬೆಳ್ತಂಗಡಿ: ಕೇಂದ್ರ ಸರಕಾರವು ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ (ಯುನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್ )ಯಡಿ ದೇಶಾದ್ಯಂತ ಕುಗ್ರಾಮಗಳ ಸಹಿತ ಸ್ವಲ್ಪವೂ ನೆಟ್ ವರ್ಕ್ ತಲುಪದ 3 ಲಕ್ಷಕ್ಕೂ ಅಧಿಕ ಸ್ಥಳಗಳಲ್ಲಿ ಸ್ಥಾಪಿಸಲಿರುವ ಬಿಎಸ್ಸೆನ್ನೆಲ್ 4ಜಿ ಸೇವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಲಿದೆ. ಇದರಿಂದ ದ.ಕ ಜಿಲ್ಲೆಯಲ್ಲಿ ನೆಟ್ ವರ್ಕ್ ಲಭಿಸಲಿದೆ.
ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ನ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕೇಂದ್ರ ಸರಕಾರವು ಮೆಕ್ ಇನ್ ಇಂಡಿಯಾದಡಿ ಟಿಸಿಎಸ್ (ಟಾಟಾ ಕನ್ನಲ್ಟೆನ್ಸಿ ಸರ್ವೀಸ್) ಮತ್ತು ಐಟಿಐ ಲಿ, ಒಪ್ಪಂದದೊಂದಿಗೆ ದೇಶದ ವಿವಿಧೆಡೆ 4ಜಿ ನೆಟ್ ವರ್ಕ್ ಟವರ್ ಸ್ಥಾಪಿಸಲಿದೆ. ಈಗಿರುವ 4ಜಿಯನ್ನೇ ಮುಂದೆ 5ಜಿ ಸೇವೆಯಾಗಿ ಪರಿವರ್ತಿಸಲು ಕೂಡ ಸಾಧ್ಯವಿದೆ.
ಬೆಳ್ತಂಗಡಿ ತಾಲೂಕಿನ ಪೆರಾಡಿ, ಅಣಿಯೂರು, ಬದನಾಜೆ, ನಿಟ್ಟಡ್ಕ, ಬರೆಂಗಾಯ, ಚಾರ್ಮಾಡಿ ಕಾಂಜಾಲ್, ಮಾಲಾಡಿ ಕರಿಯಬೆ, ಕೆಮ್ಮಟೆ ,ಕೊಡಿಯಾಲುಬೈಲು, ಕೊಲ್ಪಾಡಿ, ಕುಪ್ಲೊಟ್ಟು, ಬೈಪಾಡಿ, ಮುಂಡೂರು, ಪೆರ್ನಡ್ಕ ಮಿಯಲಾಜೆ, ಎಳನೀರು, ಪೆರ್ಲ ಈ ಸ್ಥಳಗಳಲ್ಲಿ ಟವರ್ ನಿರ್ಮಾಣಗೊಳ್ಳಲಿವೆ.