ಬಂಗಾಡಿ: ಬಂಗಾಡಿ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಇಲ್ಲಿಯ ಕೆನರಾ ಬ್ಯಾಂಕ್‌ನಲ್ಲಿ ನಿತ್ಯ ವ್ಯವಹಾರಕ್ಕೆ ಗ್ರಾಹಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಂಗಾಡಿ ಪರಿಸರದಲ್ಲಿ ಬಹಳಷ್ಟು ನೆಟ್‌ವರ್ಕ್ ಸಮಸ್ಯೆಯಿದೆ. ಇದರಿಂದಾಗಿ ಸರ್ವರ್ ಕೈಗೊಡುತ್ತಿದ್ದು, ಬ್ಯಾಂಕ್‌ನಲ್ಲಿ ಸಮರ್ಪಕ ಕಾರ್ಯನಿರ್ವಹಣೆಗೆ ಕಷ್ಟವಾಗಿದೆ. ಇದರಿಂದಾಗಿ ಗ್ರಾಹಕರು ತಮ್ಮ ಬ್ಯಾಂಕ್‌ನ ಒಂದು ಕಾರ್ಯಕ್ಕೆ ಮೂರು-ನಾಲ್ಕು ದಿನಗಳಿಂದ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಬೆಳಿಗ್ಗೆಯೇ ಬ್ಯಾಂಕ್‌ನಲ್ಲಿ ಸರತಿ ಸಾಲು ಕಂಡು ಬರುತ್ತಿದೆ. ಸರ್ವರ್ ಕೈಗೊಡುವುದರಿಂದ ಬ್ಯಾಂಕಿನ ಅಧಿಕಾರಿಗಳು ಏನೂ ಮಾಡಲು ಸಾಧ್ಯವಾಗದೆ ಕೊನೆಗೆ ಬ್ಯಾಂಕ್‌ನ ಎದುರು ‘ನೆಟ್‌ವರ್ಕ್ ಇಲ್ಲ’ ಎಂಬ ಬೋರ್ಡ್‌ನ್ನು ನೇತಾಕಿದ್ದಾರೆ. ಆದರೆ ಸರ್ವರ್ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲದ ಗ್ರಾಮೀಣ ಪ್ರದೇಶದ ಜನರು ಬ್ಯಾಂಕ್‌ನ ಸಿಬ್ಬಂದಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಬ್ಯಾಂಕ್‌ನ ಉನ್ನತಾಧಿಕಾರಿಗಳು ಗಮನ ಹರಿಸಿ, ಈ ಸಮಸ್ಯೆಯನ್ನು ನಿವಾರಿಸುವಂತೆ ಗ್ರಾಹಕರ ಪರವಾಗಿ ಶೌಕತ್ ಆಲಿ ಅವರು ಆಗ್ರಹಿಸಿದ್ದಾರೆ.