ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೂ.30: ನಿಮ್ಮ ಸೌಂದರ್ಯದ ರಾಯಭಾರಿ “ನೂರಾ ಗೋಲ್ಡ್ & ಡೈಮಂಡ್ಸ್” ಬೆಳ್ತಂಗಡಿಯಲ್ಲಿ ಶುಭಾರಂಭ

ಬೆಳ್ತಂಗಡಿ: ಬೆಳೆಯುತ್ತಿರುವ ಬೆಳ್ತಂಗಡಿಗೆ ಇನ್ನೊಂದು ಮೆರುಗು ಎಂಬಂತೆ ಮತ್ತೊಂದು ವಿಶಾಲ ಸ್ವರ್ಣಾಭರಣ ಮಳಿಗೆ ತಮ್ಮ ವ್ಯವಹಾರ ಕೇಂದ್ರ ಆರಂಭಿಸುತ್ತಿದೆ.


ಬೆಳ್ತಂಗಡಿ ಮೂರು ಮಾರ್ಗದ ಬಳಿ ಇರುವ ಆಶಾ ಕಿರಣ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿ ನೂರಾ ಗೋಲ್ಡ್ & ಡೈಮಂಡ್ ಎಂಬ ಹೊಸ ಸಂಸ್ಥೆ ಜೂ.30 ರಂದು ಶುಭಾರಂಭಗೊಳ್ಳಲಿದೆ.
ದೇಶ ವಿದೇಶಗಳಲ್ಲಿ ವ್ಯವಹಾರ ಕ್ಷೇತ್ರ ಹೊಂದಿರುವ ಮಾಲಿಕರ ನೇತೃತ್ವ, ಸ್ವರ್ಣೋದ್ಯಮದಲ್ಲೇ ಎರಡು ದಶಕಗಳ ಅನುಭವ ಹೊಂದಿರುವ ಅನುಭವಿ ಸಿಬ್ಬಂದಿಗಳ ಒಳಗೊಳ್ಳುವಿಕೆಯೊಂದಿಗೆ ಗ್ರಾಹಕರಿಗೆ ಸೇವೆ ನೀಡಲು ಹೊಸ ತಂಡ ಸನ್ನದ್ದವಾಗಿದೆ.
“ನಿಮ್ಮ ಸೌಂದರ್ಯದ ರಾಯಭಾರಿ ನೂರಾ ಗೋಲ್ಡ್” ಎಂಬ ಟ್ಯಾಗ್ ಲೈನ್‌ನೊಂದಿಗೆ ನೂತನ ಸಂಸ್ಥೆ ತಾಲೂಕಿನ ಆಭರಣ ಪ್ರಿಯರ ಸೇವೆಗೆ ಸಿದ್ಧಗೊಂಡಿದೆ.


ಆಕರ್ಷಕ ವಿನ್ಯಾಸದ ಮಳಿಗೆ, ವಿಶಾಲವಾದ ಸ್ಥಳಾವಕಾಶ, ಅಷ್ಟೇ ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇದೆ.
ಆಭರಣಗಳ ಹೊಚ್ಚ ಹೊಸ ಶೈಲಿಯ ಡಿಸೈನ್‌ಗಳು, 916 ಮತ್ತು ಆಂಟಿಕ್ ಆಭರಣಗಳು, ಡೈಮಂಡ್ ಆಭರಣಗಳು, ಹೊಸ ಹೊಸ ಶೈಲಿಯಲ್ಲಿ ಇಲ್ಲಿ ದೊರೆಯುತ್ತದೆ.
೦% ವೇಸ್ಟೇಜ್, ಮೇಕಿಂಗ್ ಚಾರ್ಜ್ ಮೇಲೆ 50% ಡಿಸ್ಕೌಂಟ್, ರೂ. 10 ಸಾವಿರ ಡೈಮಂಡ್ ಆಭರಣಗಳ ಪ್ರತೀ ಕ್ಯಾರೆಟ್ ಮೇಲೆ ಆಫರ್ ಇದೆ.

ನೂತನ ಸಂಸ್ಥೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಕಾರ್ಯದರ್ಶಿ, ಮಅದಿನ್ ಅಕಾಡಮಿ ಇದರ ಚೇರ್ಮೆನ್ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಮುಲ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಉದ್ಘಾಟಿಸಲಿದ್ದಾರೆ. ಎ.ಕೆ ಉಮರ್ ಮುಸ್ಲಿಯಾರ್ ಚೇರ್ಮೆನ್ ಅಲ್ ಮಾಜಿದ್ & ನೂರ ಗೋಲ್ಡ್ ಭಾಗವಹಿಸಲಿದ್ದಾರೆ.

ಉದ್ಘಾಟನೆಯ ಪ್ರಯುಕ್ತ ಪ್ರತೀ ಖರೀದಿಗೆ ಗಿಫ್ಟ್ ಕೂಪನ್ ಇದ್ದು ಅದೃಷ್ಟಶಾಲಿಗೆ ಸ್ಕೂಟಿ ಬಹುಮಾನ, ಉದ್ಘಾಟನೆಯ ದಿನ ಭೇಟಿ ನೀಡುವ ಎಲ್ಲರಿಗೂ ಉಚಿತ ಕೂಪನ್ ಇದ್ದು ಡೈಮಂಡ್ ರಿಂಗ್ ಗೆಲ್ಲುವ ಅವಕಾಶವಿದೆ.


ಕೆಳಗಿನ ನಂಬರ್‌ಗೆ ಕರೆ ಮಾಡಿ ಸಂಸ್ಥೆಯ ಪ್ರಚಾರದ ಪೋಸ್ಟರ್ ಅನ್ನು ಪಡೆದುಕೊಂಡು ತಮ್ಮ ಮೊಬೈಲ್ ಸ್ಟೇಟಸ್‌ಗೆ ಹಾಕಿ ೫೦ ಮಂದಿ ವೀಕ್ಷಿಸಿದ ಸ್ಕ್ರೀನ್ ಶಾರ್ಟ್ ಅನ್ನು ಕಳಿಸಿಕೊಟ್ಟಲ್ಲಿ ಅದರಲ್ಲಿ ಅದೃಷ್ಟವಂತರನ್ನು ಆರಿಸಿ ಅವರಿಗೆ ಸ್ಮಾರ್ಟ್ ಪೋನ್ ಗೆಲ್ಲುವ ಅವಕಾಶ ಇದೆ. ಎಲ್ಲರೂ ಮಳಿಗೆಗೆ ಭೇಟಿ ನೀಡಿ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಮಾಲಿಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ 9449988916 ಸಂಪರ್ಕಿಸಬಹುದು.

Related posts

ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಶುಭ ಹಾರೈಸಿದ ಡಾ. ಡಿ ವೀರೇಂದ್ರ ಹೆಗ್ಗಡೆ

Suddi Udaya

ಬಂದಾರು: ಕಬಿಲಾಲಿ ನಿವಾಸಿ ರುಕ್ಮಯ ಗೌಡ ನಿಧನ

Suddi Udaya

ಭಜನೆ, ಭಜಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನೆ
ಆರೋಪ: ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

Suddi Udaya

ಬಳಂಜ ಶಾಲಾ 75 ರ ಸಂಭ್ರಮಾಚರಣೆ ಪ್ರಯುಕ್ತ ಚಿಂತನಾ ಕಾರ್ಯಗಾರ

Suddi Udaya

ಟೆನ್ನಿಸ್ ವಾಲಿಬಾಲ್ ಪಂದ್ಯಾಟ : ಎಸ್ ಡಿ ಎಂ ಕ್ರೀಡಾ ವಿದ್ಯಾರ್ಥಿನಿಯರಿಗೆ ಕಂಚಿನ ಪದಕ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜು : ಜೆ ಇ ಇ ಮೈನ್ಸ್ ನಲ್ಲಿ ಅತ್ಯುತ್ತಮ ಫಲಿತಾಂಶ

Suddi Udaya
error: Content is protected !!