25.9 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಮಹಿಳಾ ಘಟಕ, ಯುವ ವೇದಿಕೆ “ಆಟಿಡೊಂಜಿ ದಿನ” ಹಾಗೂ “ಪ್ರತಿಭಾ ಪುರಸ್ಕಾರ”

ನಡ: ಗೌಡರ ಯಾನೆ ಒಕ್ಕಲಿಗರ ಸೇವಾ ಮಹಿಳಾ ಘಟಕ, ಯುವ ವೇದಿಕೆ “ಆಟಿಡೊಂಜಿ ದಿನ” ಮತ್ತು “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ನಡ ಸಮಾಜ ಮಂದಿರದಲ್ಲಿ ಜು.30ರಂದು ಜರುಗಿತು.
ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ದೀಪ ಪ್ರಜ್ವಲಿಸುವ ಜೊತೆಗೆ ಚೆನ್ನೆಮಣೆ ಆಟ ಆಡುವ ಮೂಲಕ ಚಾಲನೆ ನೀಡಿ, ಮಾತನಾಡುತ್ತಾ ನಮ್ಮ ಸಮುದಾಯದ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡಬೇಕು. ಜೊತೆಯಲ್ಲಿ ಆಟಿ ತಿಂಗಳ ಆಚರಣೆ, ದೀಪಾವಳಿ, ದೈವ- ದೇವರ ಆರಾಧನೆ, ನಂಬಿಕೆ, ಹಿಂದಿನ ಕಾಲದಿಂದ ಆಚರಣೆ ಮಾಡಿಕೊಂಡು ಬರುವ ಬಗ್ಗೆ ಮಕ್ಕಳಿಗೆ ಶಿಕ್ಷಣ ಜೊತೆಯಲ್ಲಿ ಮೈಗೂಡಿಸಿಕೊಳ್ಳುವಂತೆ ಪೋಷಕರು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕಿ ಶೀಲಾವತಿ ಧರ್ಮೇಂದ್ರ ಗೌಡ ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ನಡ-ಕನ್ಯಾಡಿ ಗೌಡರ ಯಾನೆ ಒಕ್ಕಲಿಗರ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಹೇಮಾವತಿ ಸೋಮನಾಥ ಗೌಡ ಸಭೆಯ ಅಧ್ಯಕ್ಷೆ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ, ಯುವ ವೇದಿಕೆ ಅಧ್ಯಕ್ಷ ಯಶವಂತ ಗೌಡ ಬನಂದೂರು, ಸಂಘಟನಾ ಕಾರ್ಯದರ್ಶಿ, ನಡ ಗ್ರಾಮ ಸಮಿತಿ ಉಸ್ತುವಾರಿ ಪ್ರಮೋದ್ ಗೌಡ ದಿಡುಪೆ, ನಡ ಗ್ರಾಮದ ಸಮಿತಿ ಗೌರವ ಅಧ್ಯಕ್ಷ, ಪ್ರೌಡ ಶಾಲಾ ನಿವೃತ್ತ ಶಿಕ್ಷಕ ವಿವೇಕಾನಂದ ಗೌಡ ಭೋಜರ, ಯವ ವೇದಿಕೆ ಅಧ್ಯಕ್ಷ ವಸಂತ ಗೌಡ ಕೊಯಗುಡ್ಡೆ ಉಪಸ್ಥಿತರಿದ್ದರು.

ಒಕ್ಕಲಿಗ ಗೌಡ ಜನಾಂಗ ಮತ್ತು ಆಟಿ ತಿಂಗಳ ಮಹತ್ವದ ಬಗ್ಗೆ ಮಕ್ಕಳಿಗೆ ರಸ ಪ್ರಶ್ನೆ ಹಾಗೂ ಮಕ್ಕಳು, ಮಹಿಳೆಯರಿಂದ ಭಕ್ತಿ ಗೀತೆ, ಭಾವಗೀತೆ ಮತ್ತು ಸಂಧಿ ಪಾಡ್ಡನವನ್ನು ಉಪನ್ಯಾಸಕಿ ಉಮಾವತಿ ನಡೆಸಿಕೊಟ್ಟರು. ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿದ ಸುಮಾರು 20 ಕ್ಕೂ ಹೆಚ್ಚು ಬಗೆಯ ತಿಂಡಿ, ತಿನಿಸುಗಳನ್ನು ತಂದಿದ್ದರು.

ನಡ ಬೀಜದಡಿ ಮನೆ ನಿವೃತ್ತ ಸೈನಿಕ ಯೋಗೀಶ ಗೌಡ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿದರು. 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸ್ವಜಾತಿ ಮಕ್ಕಳ ಪ್ರತಿಭಾ ಪುರಸ್ಕಾರ, ವಿಧ್ಯಾರ್ಥಿಗಳಿಗೆ, ಮಹಿಳೆಯರಿಗೆ ಏರ್ಪಡಿಸಿದ ಆಟೋಟ ಸ್ಪರ್ಧಾ ವಿಜೇತರಿಗೆ ಬಹಮಾನ ನೀಡಿದರು.

ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ,ಗ್ರಾಮ ಸಮಿತಿ ಮಹಿಳಾ ಘಟಕ ಯುವ ವೇದಿಕೆ ಪದಾಧಿಕಾರಿಗಳು, ಸದಸ್ಯರು, ಹಾಗೂ ಸಮಾಜ ಬಾಂಧವರು ಭಾಗವಹಿಸಿ ಸಹಕರಿಸಿದರು. ನಡ ಮಹಿಳಾ ಘಟಕ ಗೌರವಾಧ್ಯಕ್ಷರಾದ ಮಮತಾ ಶ್ರೀನಾಥ್ ಸ್ವಾಗತಿಸಿ, ರತ್ನಾವತಿ ಕಾರ್ಯಕ್ರಮ ನಿರೂಪಿಸಿ, ಮಹಿಳಾ ಕಾರ್ಯದರ್ಶಿ ತುಳಸಿ ಹರೀಶ್ ಚಂದ್ರ ಗೌಡ ವಂದಿಸಿದರು.

Related posts

ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ನಾರಾವಿ ವಲಯದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಆ.21-22: ರೈತರಿಗೆ ಜೇನು ಕೃಷಿ ಹಾಗೂ ಜೇನಿನ ಮೌಲ್ಯವರ್ಧನೆ ಕುರಿತು ಸಾಂಸ್ಥಿಕ ತರಬೇತಿ

Suddi Udaya

ಕೊಲ್ಪಾಡಿ ಕಾರ್ಯಕ್ಷೇತ್ರದ ಓಂ ಶ್ರೀ ಜ್ಞಾನವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಪ್ರಥಮ ತಾಲೂಕು ಅಧಿವೇಶನಕ್ಕೆ ಸಜ್ಜಾಗುತಿದೆ ಬೆಳ್ತಂಗಡಿ ಅಭಾಸಾಪ: ಡಿ.22 ರಂದು ಬಲಿಪ ರೆಸಾರ್ಟಿನಲ್ಲಿ ಅಧಿವೇಶನ

Suddi Udaya

ಕಳಿಯ ಗ್ರಾಮ ಪಂಚಾಯತ್ ನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ

Suddi Udaya
error: Content is protected !!