22.1 C
ಪುತ್ತೂರು, ಬೆಳ್ತಂಗಡಿ
May 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ ಭಾರತೀಯ ಜೈನ್ ಮಿಲನ್ ವತಿಯಿಂದ ವಿಶೇಷ ಆಟಿದ ಕೂಟ, ಜಿನ ಭಜನಾ ಪುಸ್ತಕ ಬಿಡುಗಡೆ ಮತ್ತು ಪರಮ ಪೂಜ್ಯ ಆಚಾರ್ಯ 108 ಕಾಮಕುಮಾರ ನಂದಿ ಮಹಾರಾಜರ ವಿನಯಾಂಜಲಿ ಸಭೆ,

ನಾರಾವಿ : ಭಾರತೀಯ ಜೈನ್ ಮಿಲನ್ ನಾರಾವಿ ಶಾಖೆಯ ವತಿಯಿಂದ ಜು. 31ರಂದು ನಾರಾವಿ ಧರ್ಮಶ್ರೀ ಸಭಾ ಭವನದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ ಮುನಿಗಳಾದ ಪರಮಪೂಜ್ಯ ಆಚಾರ್ಯ 108 ನಂದಿಕುಮಾರ ಮಹಾರಾಜರಿಗೆ ವಿನಯಾಂಜಲಿ ಸಭೆ, ಜಿನಭಜನಾ ಪುಸ್ತಕ ಬಿಡುಗಡೆ ಮತ್ತು ವಿಶೇಷ ಆಟಿದ ಕೂಟವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪ್ರಸಿದ್ಧ ಸಾಹಿತಿಗಳು, ಜೈನ ವಿದ್ವಾಂಸರು ಆಗಿರುವ ಶ್ರೀ ಮುನಿರಾಜ್ ರೆಂಜಾಳರವರು ಉದ್ಘಾಟಿಸಿ ಪೂಜ್ಯ ಶ್ರೀ ಗಳಿಗೆ ವಿನಯಾಂಜಲಿಯನ್ನು ಸಲ್ಲಿಸಿ ಆಟಿ ತಿಂಗಳ ವೈಶಿಷ್ಟ್ಯತೆ ಮತ್ತು ಆಚರಣೆಗಳ ಮಹತ್ವದ ಜೊತೆ ವಿಶೇಷ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ನಿವೃತ್ತ ಶಿಕ್ಷಕರಾದ ಸನ್ಮತ್ ಕುಮಾರ್ ರವರು ಪರಮ ಪೂಜ್ಯ ಶ್ರೀ ಗಳಿಗೆ ವಿಶೇಷ ನುಡಿ ನಮನವನ್ನು ಸಲ್ಲಿಸಿದರು.


ಭಾರತೀಯ ಜೈನ್ ಮಿಲನ್ ನಾರಾವಿ ಇದರ ಸಹಕಾರದಿಂದ ಸನತ್ ಕುಮಾರ್ ಜೈನ್ ಈದು ವಿರಚಿತ “ಅಮರ ಪ್ರಭು ಜಿನನ ಜಯ ಜಯ ಭಜನೆ” ಎಂಬ ಜಿನ ಭಜನಾ ಪುಸ್ತಕವನ್ನು ಅತಿಥಿ ಗಣ್ಯರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಕಲಾ ಕ್ಷೇತ್ರದ ಸಾಧಕ ಸನತ್ ಕುಮಾರ್ ಜೈನ್ ಈದು, 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 4ನೇ ಶ್ರೇಣಿ ಪಡೆದ ಕುಮಾರಿ ಮಾನ್ಯ ಜೈನ್ ನಲ್ಲೂರು ಮತ್ತು ಟಿ.ಎನ್ ಪ್ರೊಡಕ್ಷನ್ ನ ನಿರ್ದೇಶಕರು, ಸಾಹಿತ್ಯ ಮತ್ತು ಕಲಾ ಸಾಧಕ,ಬಹುಮುಖ ಪ್ರತಿಭೆ ಸುರೇಂದ್ರ ಜೈನ್ ನಾರಾವಿ ಇವರುಗಳ ಪ್ರತಿಭೆಯನ್ನು ಗುರುತಿಸಿ ನಾರಾವಿ ಜೈನ್ ಮಿಲನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಜೈನರ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ತುಳುನಾಡಿನ ಪುರಾತನ ವಸ್ತುಗಳ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ಮಾಣಿಕ್ಯರಾಜ್ ವೇಣೂರು ನೇತೃತ್ವದ ‘ಶ್ರೀ ಬಾಹುಬಲಿ’ ಕಲಾ ತಂಡದಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಸಮಾರಂಭದಲ್ಲಿ ನಾರಾವಿ ಜೈನ್ ಮಿಲನ್ ನ ಅಧ್ಯಕ್ಷರಾದ ಅಶೋಕ್ ಕುಮಾರ್ ಜೈನ್ ಈದು,ಜೈನ್ ಮಿಲನ್ ಮಂಗಳೂರು ವಿಭಾಗದ ವಲಯ ನಿರ್ದೇಶಕರಾದ ಶ್ರೀವರ್ಮ ಅಜ್ರಿ,ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್,ನಾರಾವಿ ಜೈನ್ ಮಿಲನ್ ನ ಕಾರ್ಯದರ್ಶಿ ಅಭಿಜಿತ್ ಜೈನ್, ಕೋಶಾಧಿಕಾರಿ ಕುಸುಮ ವಿನಯ್ ಹೆಗ್ಡೆ ಮತ್ತು ಮಿಲನ್ ಬಂಧುಗಳು ಉಪಸ್ಥಿತರಿದ್ದರು.


ಶಿಶುಪಾಲ್ ಜೈನ್ ಬೈರ್ನಡೆಗುತ್ತು ಸ್ವಾಗತಿಸಿದರು. ಪ್ರಶಾಂತ್ ಕುಮಾರ್ ಜೈನ್ ವಂದಿಸಿದರು. ಶಿಕ್ಷಕರಾದ ನಿರಂಜನ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಕನಾ೯ಟಕ ಸಂಗೀತ ನೃತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಡಾ. ಕೃಪಾ ಫಡಕೆ ನೇಮಕ

Suddi Udaya

ಕುವೆಟ್ಟು ಮಹಾಶಕ್ತಿ ಕೇಂದ್ರದ ಕೊಯ್ಯೂರು ಶಕ್ತಿಕೇಂದ್ರದಲ್ಲಿ ನಮೋ ಯುವ ಚೌಪಲ್ 400 ಯೋಜನೆಗಳ ಮಾಹಿತಿ ಕಾರ್ಯಕ್ರಮ

Suddi Udaya

ಕೊಕ್ಕಡ ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಉಪ್ಪಿನಂಗಡಿ: ನೇತ್ರಾವತಿ ಮತ್ತು ಕುಮಾರಧಾರ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ಪ್ರವಾಹ: ಸಂಗಮ ಆಗಲು 2 ಮೆಟ್ಟಿಲು ಬಾಕಿ; ನಿರೀಕ್ಷೆಯಲ್ಲಿ ಭಕ್ತರು

Suddi Udaya

ಸುದ್ದಿ ಉದಯ ಪತ್ರಿಕೆಯ ಪ್ರತಿನಿಧಿ ಕರುಣಾಕರ ಶಿಶಿಲ ರವರ ನೂತನ ಗೃಹ “ಮತ್ಸ್ಯ ಕೃಪಾ” ಕ್ಕೆ ಶಾಸಕ ಹರೀಶ್ ಪೂಂಜ ಹಾಗೂ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ, ಶುಭಹಾರೈಕೆ

Suddi Udaya

ಮಾಚಾರು ಕೆಂಪನೊಟ್ಟು ವಿವಾಹಿತ ಮಹಿಳೆ ಶಶಿಕಲಾ ಶವ ಬಾವಿಯಲ್ಲಿ ಪತ್ತೆ : ಹಲವಾರು ಶಂಕೆ : ಬಂಟ್ವಾಳ ಡಿವೈಎಸ್‌ಪಿ, ಸ್ಥಳಕ್ಕೆ ಆಗಮಿಸಿ ತನಿಖೆ

Suddi Udaya
error: Content is protected !!