September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಉಜಿರೆ ಜನಾರ್ದನ ದೇವಸ್ಥಾನದ ನೂತನ ವಿಜಯಗೋಪುರ ಲೋಕಾರ್ಪಣೆ

ಉಜಿರೆ: ಉಜಿರೆ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನೂತನ ವಿಜಯಗೋಪುರದ ಲೋಕಾರ್ಪಣಾ ಕಾರ್ಯಕ್ರಮವು ಮಾ.4ರಂದು ಜರುಗಿತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು  ವಿಜಯ ಗೋಪುರ ಲೋಕಾರ್ಪಣೆಗೊಳಿಸಿದರು.

ಕಾಸರಗೋಡು ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ದೀಪ ಪ್ರಜ್ವಲಿಸಿದರು.

ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಬರೋಡ, ಬಾರ್ಕೂರು ಶ್ರೀ ನವಾಕ್ಷರೀ ಸಂಸ್ಕೃತಿ ಚಿಂತಕ ದಾಮೋದರ ಶರ್ಮ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ, ಶಾಸಕ ಹರೀಶ್‌ ಪೂಂಜ, ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್‌ ಕುಮಾರ್, ರಾಜ್ಯ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ಉದ್ಯಮಿ ಶ್ರೀಪತಿ ಭಟ್, ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ, ಹಿಂದೂ ರಾಷ್ಟ್ರ ಸಭಾ ರಾಜ್ಯಾಧ್ಯಕ್ಷ ಪ್ರತಾಪ ಆರ್. ಗೌಡ, ಆರ್.ಪಿ. ಗ್ರೂಪ್ ಮಾಲಕ ಕರವೇ ರಾಮಮೂರ್ತಿ,ಪವಿತ್ರಪಾಣಿ ಶಿವರಾಮ ಪಡ್ವೆಟ್ನಾಯ, ವಿಜಯ ಗೋಪುರ ಸಮಿತಿ ಪ್ರಧಾನ ಸಂಚಾಲಕ ಕೆ. ಮೋಹನ್ ಕುಮಾರ್, ವಿಜಯ ಗೋಪುರ ಸಮಿತಿ ಕೋಶಾಧಿಕಾರಿ ರಾಜೇಶ್ ಪೈ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಮಹಿಳಾ ವಿಭಾಗ ಸಂಚಾಲಕಿ ಜಯಶ್ರೀ ಪ್ರಕಾಶ ಗೌಡ, ಅನಂತಮೋಹನ ಮೂಡಣ್ಣಾಯರು, ಮಂಜುನಾಥ, ಮಾತೃಶಕ್ತಿ ಶಿಲಾ ಸಂಚಯನ ಅಧ್ಯಕ್ಷೆ ವನಿತಾ ವಿಶ್ವನಾಥ ಶೆಟ್ಟಿ ಗೌರವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಮಾಣಿಲ ಮಾತೃಭೂಮಿ ಯುವ ವೇದಿಕೆ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಿಶೇಷ ಕಾರ್ಯಾಗಾರ

Suddi Udaya

ವೇಣೂರು ಶ್ರೀ ವಿಶ್ವಕರ್ಮ ಸೇವಾ ಸಂಘ ಹಾಗೂ ಕಾಳಿಕಾಂಬ ಮಹಿಳಾ ಮಂಡಳಿಯ ಮಹಾಸಭೆ , ಶ್ರೀ ವಿಶ್ವಕರ್ಮ ಪೂಜೆ

Suddi Udaya

ಪಡಂಗಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ಉಚಿತ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ: ಮಗುವಿನ ನೆರವಿಗಾಗಿ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ಪೆನ್ನು ಮಾರಾಟ

Suddi Udaya

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಶೇಖರ ಕುಕ್ಕೇಡಿ ಅವರಿಂದ ಅರ್ಜಿ ಸಲ್ಲಿಕೆ

Suddi Udaya

ಬೆಳ್ತಂಗಡಿ: ದಿವ್ಯಜ್ಯೋತಿ ನವೋದಯ ಸಂಘದಿಂದ ಸುನಂದರಿಗೆ ಚೈತನ್ಯ ವಿಮೆ ವಿತರಣೆ

Suddi Udaya
error: Content is protected !!