ಬೆಳ್ತಂಗಡಿ: ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣವನ್ನು ಮರುತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಆ.2 ರಂದು ಮನವಿ ನೀಡಲಾಯಿತು.
ಕಳೆದ 11 ವರ್ಷಗಳ ಹಿಂದೆ ಧರ್ಮಸ್ಥಳ ಪಾಂಗಾಳ ನಿವಾಸಿ ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಕೊಲೆ ನಡೆದಿದ್ದರೂ ಇದುವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳ ಪತ್ತೆ ಆಗಿರುವುದಿಲ್ಲ ಸೌಜನ್ಯಳ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷದ ಹಿಂದೆಯೂ ಕೂಡ ನಮ್ಮ ಒಕ್ಕೂಟದ ವತಿಯಿಂದ ಆರೋಪಿಗಳ ಪತ್ತೆಗಾಗಿ ಮನವಿ ಸಲ್ಲಿಸಿರುತ್ತೇವೆ ಇನ್ನಾದರೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಕೈಗೊಂಡು ಸೌಜನ್ಯಳ ಕುಟುಂಬ ವರ್ಗಕ್ಕೆ ಸೂಕ್ತ ನ್ಯಾಯ ಹಾಗೂ ಸಮಾಜಕ್ಕೆ ಭದ್ರತೆ ದೊರಕಿಸಿಕೊಡಬೇಕಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್, ಕಾರ್ಯದರ್ಶಿ ಆಶಾ ಸತೀಶ್, ಪ್ರಮುಖರಾದ ಲೋಕೇಶ್ವರಿ ವಿನಯಚಂದ್ರ, ಶಾಂತಾ ಬಂಗೇರ, ಮೆದೀನಿ ಡಿ. ಗೌಡ, ವಿನೋದಿನಿ ರಾಮಪ್ಪ, ಸೌಮ್ಯಶ್ರೀ ಶೆಟ್ಟಿ , ಲತಾ ಬಿ, ಶಾರದಾ, ಉಷಾ ಲಕ್ಷಣ ಗೌಡ, ಯಶೋಧ ಲಾಯಿಲ ಉಪಸ್ಥಿತರಿದ್ದರು.