23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಾರದ ಮಂಟಪ ಉಜಿರೆ 17ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ, ಪೂರ್ವಭಾವಿ ಸಭೆ

ಉಜಿರೆ:ಸಾರ್ವಜನಕ ಶ್ರೀ ಗಣೇಶೋತ್ಸವ ಸಮಿತಿ ಶಾರದಾ ಮಂಟಪ ಉಜಿರೆ ಇದರ ವತಿಯಿಂದ ನಡೆಯುವ ಶ್ರೀ ಗಣೇಶೋತ್ಸವದ ಪೂರ್ವಾಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಆಗಷ್ಟ್ 3 ರಂದು ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾ ಮಂಟಪದಲ್ಲಿ ನಡೆಯಿತು.

ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 21 ರವರೆಗೆ ಶಾರದ ಮಂಟಪದಲ್ಲಿ ನಡೆಯಲಿರುವ 17ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವಾಧ್ಯಕ್ಷರಾದ ಶರತ್ ಕೃಷ್ಣ ಪಡ್ವೆಟ್ನಾಯರು ಮತ್ತು ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ಅವರು ಬಿಡುಗಡೆಗೊಳಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಸಂಚಾಲಕರಾದ ಮೋಹನ್ ಕುಮಾರ್, ಕಳೆದ ಬಾರಿಯ ಅಧ್ಯಕ್ಷರಾದ ಅರವಿಂದ ಕಾರಂತ್, ಸಂಚಾಲಕರಾದ ಪ್ರಕಾಶ್ ಅಪ್ರಮೆಯ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣಗೌಡ, ಕಾರ್ಯದರ್ಶಿ ಪ್ರವೀಣ್, ಕೋಶಾಧಿಕಾರಿ ಧೀರಾಜ್ ಉಪಸ್ಥಿತರಿದ್ದರು.ಕುಮಾರಿ ಇಂಚರ ಕಾರಂತ ಪ್ರಾರ್ಥನೆ ಹಾಡಿದರು.ಪ್ರಸಾದ್ ಬಿ.ಎಸ್ ಮತ್ತು ಗೋಪಾಲಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು. ಮಮತಾ ವಂದಿಸಿದರು.

Related posts

ವೇಣೂರು: ಭ| ಬಾಹುಬಲಿಸ್ವಾಮಿ ಮೂರ್ತಿಗೆ ಕೊನೆಯ ಮಹಾಮಸ್ತಕಾಭಿಷೇಕ

Suddi Udaya

ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಜೈನ್, ಕಾರ್ಯದರ್ಶಿಯಾಗಿ ಧನಂಜಯ ಗೌಡ ಆಯ್ಕೆ

Suddi Udaya

ಬೆಳ್ತಂಗಡಿ ಕುಡಾಳ ದೇಶಸ್ತ ಆದ್ಯ ಗೌಡ್ ಬ್ರಾಹ್ಮಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಜನಪದ ಗೀತಗಾಯನ ಸ್ಪರ್ಧೆ: ವಾಣಿ ಕಾಲೇಜಿನ ರೇಂಜರ್ಸ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಚಿದಾನಂದ ಇಡ್ಯ, ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಆಯ್ಕೆ

Suddi Udaya
error: Content is protected !!