24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಚಿತ್ಪಾವನ ಬ್ರಾಹ್ಮಣರ ಬಳಗದ ಮಹಾಸಭೆ

ಬೆಳ್ತಂಗಡಿ: ಚಿತ್ಪಾವನ ಬ್ರಾಹ್ಮಣರ ಬಳಗ, ಉಜಿರೆ-ಬೆಳ್ತಂಗಡಿ ಇದರ ವಿಶೇಷ ಮಹಾಸಭೆ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾವನದಲ್ಲಿ ಆ.6 ರಂದು ನಡೆಯಿತು.
ಬಳಗದ ಅಧ್ಯಕ್ಷ ಯೋಗೀಶ್ ಆರ್.ಭಿಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೈಲಾವನ್ನು ಸ್ವೀಕರಿಸಿ, ಬಳಗವನ್ನು ರಾಜ್ಯದ ಸಂಘ- ಸಂಸ್ಥೆಗಳ ನೋಂದಾವಣೆ ಕಾನೂನಿನ ಪ್ರಕಾರ ನೋಂದಾವಣೆ ಮಾಡುವುದೆಂದು ತೀರ್ಮಾನಿಸಲಾಯಿತು.


ಬಳಗದ ವತಿಯಿಂದ ಆ.19 ರಂದು ಬೆಳ್ತಂಗಡಿಯ ಬಜಕ್ಕಿರೆ ಸಾಲು ಎಂಬಲ್ಲಿ ಔಷಧೀಯ ಸಸ್ಯಗಳ ಚಿತ್ಪಾವನದ ನಿರ್ಮಾಣದ ಶುಭಾರಂಭ ನಡೆಯಲಿದೆ. ಸೆ.10 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ವಿಷ್ಣುಸಹಸ್ರನಾಮದ ಸಾಮೂಹಿಕ ಪಠಣ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.


ವೇದಿಕೆಯಲ್ಲಿ ಬಳಗದ ಗೌರವಾಧ್ಯಕ್ಷ ಶಂಕರ ಪಟವರ್ಧನ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಜತೆ ಕಾರ್ಯದರ್ಶಿ ಗಂಗಾರಾಣಿ ಜೋಶಿ, ಖಜಾಂಜಿ ಶ್ರೀಕಾಂತ ಗೋರೆ ಇದ್ದರು.
ಬಳಗದ ಕಾನೂನು ಸಲಹೆಗಾರ ವಕೀಲ ಶೈಲೇಶ್ ಠೋಸರ್ ಬೈಲಾವನ್ನು ವಿವರಿಸಿದರು. ಕಾರ್ಯದರ್ಶಿ ಗಣೇಶ್ ಶೆಂಡ್ಯೆ ಸ್ವಾಗತಿಸಿ, ವಂದಿಸಿದರು.

Related posts

ನಾಲ್ಕೂರು: ರಸ್ತೆ ಬದಿಯ ಕಳೆಗಿಡಗಂಟಿಗಳನ್ನು ತೆರವುಗೊಳಿಸಿ ಮಾದರಿಯಾದ ಜಗದೀಶ್ ಬಳ್ಳಿದಡ್ಡ

Suddi Udaya

ಬೆಳ್ತಂಗಡಿ ಲಿಯೋ ಕ್ಲಬ್ ಗೆ ‘ಉದಯೋನ್ಮುಖ ನಕ್ಷತ್ರ’ ಅವಾರ್ಡ್

Suddi Udaya

ಕಾನರ್ಪ ಪುರುಷರ ಬಳಗದ ಪುರುಷರ ರಾಶಿ ಪೂಜೆ

Suddi Udaya

ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಸ್ವಚ್ಛತಾ ಶ್ರಮದಾನ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಬೆಳ್ತಂಗಡಿ ಚಚ್೯ಕ್ರಾಸ್ ಬಳಿ ಹೊಸ ರಸ್ತೆಯಲ್ಲಿ ನಿಂತ ಮಳೆ ನೀರು

Suddi Udaya

ಎ.22: ನಾರಾವಿ ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರ ಚುನಾವಣಾ ಪ್ರಚಾರ

Suddi Udaya
error: Content is protected !!