April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಹತ್ವದ ಸಭೆ

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಇದರ ಮಹತ್ವದ ಸಭೆಯು ಆ. 5 ರಂದು ಉಜಿರೆಯ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಿತು.

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ಹೆದ್ದಾರಿಯ ಬದಿಯಲ್ಲಿ ಸರ್ವೀಸ್ ರೋಡ್ ನಿರ್ಮಿಸಿದಲ್ಲಿ ವ್ಯಾಪಾರವನ್ನೆ ನಂಬಿ ಜೀವಿಸುತ್ತಿರುವ ವರ್ತಕರ ಜೀವನ ಬೀದಿಗೆ ಬೀಳುವ ಸಾಧ್ಯತೆ ಇದೆ. ಆದ್ದರಿಂದ ರಸ್ತೆ ಅಗಲೀಕರಣ ಆಗಬೇಕಾದದ್ದೆ, ಅದಕ್ಕೆ ಉಜಿರೆ ವರ್ತಕರ ಸಹಕಾರ ಸದಾ ಇದೆ. ಆದರೆ ಸರ್ವೀಸ್ ರೋಡನ್ನು ಮಾಡದೇ ರಸ್ತೆ ಅಗಲೀಕರಣ ಮಾಡಿ ಎಂಬ ಮನವಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಂಘಟಕರು ತಿಳಿಸಿದರು. ಸರಿಯಾದ ಪಾರ್ಕಿಂಗ್ ನಿರ್ಮಿಸಿಕೊಡಬೇಕಾಗಿಯು ಮನವಿ ನೀಡುವುದೆಂದು ತೀರ್ಮಾನಿಸಿದರು.

ಸೆಪ್ಟಂಬರ್ 10 ಉಜಿರೆ ವರ್ತಕರಿಗಾಗಿ ಸ್ಪೋಡ್ಸ್ ಡೇ ಆಯೋಜಿಸುವುದು ಸೆಪ್ಟಂಬರ್ 24 ಸಂಘದ ಮಹಾಸಭೆಯನ್ನು ನಡೆಸುವುದು ಮತ್ತು ಉಜಿರೆ ವರ್ತಕ ಸಂಘದ ನೂತನ ಸಮಿತಿಯನ್ನು ರಚನೆ ಮಾಡುವುದೆಂದು ಸಂಘ ತೀರ್ಮಾನಿಸಿತು ಎಂದರು.

ಸಭೆಯಲ್ಲಿ ಅಧ್ಯಕ್ಷರಾದ ಅರವಿಂದ್ ಕಾರಂತ್, ಕಾರ್ಯದರ್ಶಿಗಳಾದ ಪ್ರಸಾದ್ ಬಿ ಎಸ್ ,ವಿಶ್ವನಾಥ ಭಂಡಾರಿ ವಿಶ್ವ ದುರ್ಗ ಮೊಬೈಲ್ ಉಪಾಧ್ಯಕ್ಷರಾದ ದಿನೇಶ್ ದಿಶಾ, ಪ್ರವೀಣ್ ಹಳ್ಳಿಮನೆ, ಹುಕುಂ ರಾಮ್ ಶಾರದಾ ಹರೀಶ್ ಕುಮಾರ್ ಆಶಿಕ ಹಾಗೂ ಇನ್ನಿತರ ವರ್ತಕರು ಉಪಸ್ಥಿತರಿದ್ದರು.

Related posts

ಬೆಳಾಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮಾಧವ ಗೌಡ

Suddi Udaya

ಜ.18: ಗೇರುಕಟ್ಟೆ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ರವರ ಉರೂಸ್ ಕಾರ್ಯಕ್ರಮ

Suddi Udaya

ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಉಜಿರೆ ಹಳೆಪೇಟೆಯಲ್ಲಿ ಫ್ಯಾಬ್ರಿಕ್ ಲೂಮ್ ರೆಡಿಮೇಡ್ ಶಾಪ್ ಉದ್ಘಾಟನೆ

Suddi Udaya

ಶಿರ್ಲಾಲು ಶಾಲಾ ಹಳೆವಿದ್ಯಾರ್ಥಿ ಸಂಘದಿಂದ ಆರ್ಥಿಕ ನೆರವು

Suddi Udaya
error: Content is protected !!