ಬೆಳ್ತಂಗಡಿ; ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ .ಟ್ರಸ್ಟ್ ( ರಿ) ಬೆಳ್ತಂಗಡಿ ತಾಲೂಕು, ಮುಂಡಾಜೆ ವಲಯ ಇದರ ವತಿಯಿಂದ ಕಡಿರುದ್ಯಾವರ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಮಲ್ಲಡ್ಕ ಕಡಿರುದ್ಯಾವರ ಕುಕ್ಕಾವು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ, ಸಿರಿ ಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆ.8 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಅಶೋಕ್ ಕುಮಾರ್ ನೆರವೇರಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಹೆಚ್ ಬಿ ಯವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಳಿಕ ಸಿರಿಧಾನ್ಯ ಮಾರುಕಟ್ಟೆ ಅಧಿಕಾರಿ ವಿವಿಧ ಸಿರಿ ಧಾನ್ಯಗಳ ಪರಿಚಯ ಮಾಡುವುದರೊಂದಿಗೆ ನವಣೆ, ಊದಲು , ಕೊರಳು, ಸಜ್ಜೆ, ಸಾಮೆ , ರಾಗಿ ಬಳಕೆ ವಿಧಾನ ಇವುಗಳಿಂದ ತಯಾರಿಸುವ ವಿವಿಧ ತಿಂಡಿಗಳ ಬಗ್ಗೆ ಬಳಕೆ ವಿಧಾನ & ರೋಗನಿರೋಧಕ ಶಕ್ತಿ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ರತ್ನಾವತಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಜನಾರ್ದನ್ , ಬಂಗಾಡಿ ಸಹಕಾರಿ ಸಂಘದ ನಿರ್ದೇಶಕ ಆನಂದ, ವಲಯ ಮೇಲ್ವಿಚಾರಕ ಜನಾರ್ದನ, ಮುಂಡಾಜೆ ಬಿ ಸೇವಾಪ್ರತಿನಿಧಿ ಲೀಲಾವತಿ ಕಾನರ್ಪ, ಸೇವಾಪ್ರತಿನಿಧಿ ಅಜಿತಾ ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಧಿಕಾರಿ ಮಧುರಾ ನಿರೂಪಿಸಿದರು. ಕೇಂದ್ರ ಸಂಯೋಜಕಿ ದಿವ್ಯಾ ಸ್ವಾಗತಿಸಿದರು. ಸೇವಾಪ್ರತಿನಿಧಿ ಸುರೇಖಾ ಧನ್ಯವಾದವಿತ್ತರು.