September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉದ್ಯೋಗದ ಕನಸು ನನಸು ಮಾಡಿದ ಸಂಸ್ಥೆ: ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುತ್ತಿರುವ ಅನುಗ್ರಹ ಟ್ರೈನಿಂಗ್ ಕಾಲೇಜು

ಬೆಳ್ತಂಗಡಿ: ವೃತ್ತಿಪರ ಕೌಶಲ್ಯ ಶಿಕ್ಷಣದ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅನುಗ್ರಹ ಎಜುಕೇಶನ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ತನ್ನ ವಿಶಿಷ್ಟ ಸೇವಾ ಪ್ರಯಾಣದ ಮತ್ತೊಂದು ಮೈಲಿಗಲ್ಲು ತಲುಪಿದೆ. ಎಂ.ಜಿ.ತಲ್ಹತ್ ಸವಣಾಲು ಅವರ ಪ್ರೇರಣಾದಾಯಕ ನೇತೃತ್ವದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಕೊನೆಗೊಳ್ಳುವುದರ ಒಳಗೆ ಇಂಟರ್ನ್ ಶಿಪ್ ತರಬೇತಿಯೊಂದಿಗೆ ಉದ್ಯೋಗ ಲಭಿಸಿದೆ. ಕಾಲೇಜಿನ ಡಿಪ್ಲೋಮಾ ಇನ್ ಫ್ಯಾಷನ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ದೇಶದ ಖ್ಯಾತ ಕಂಪನಿಯಾಗಿರುವ Shahi Exports Pvt Ltd ನಲ್ಲಿ ಟ್ರೈನಿಯಾಗಿ ಇಂಟರ್ನ್ ಶಿಪ್‌ ಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾಲೇಜಿನ ಎ.ಸಿ. ಮತ್ತು ರೆಫ್ರಿಜರೇಟರ್ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಮೂಲಕ ದೇಶದ ಪ್ರಮುಖ ಎ.ಸಿ. ಕಂಪನಿಗಳಲ್ಲಿ ಉದ್ಯೋಗ ಪಡೆದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅನುಗ್ರಹ ಟ್ರೈನಿಂಗ್ ಕಾಲೇಜು ನಿರ್ದೇಶಕರಾದ ಮಹಮ್ಮದ್ ತೌಸೀಫ್ ಕಕ್ಕಿಂಜೆ ಮತ್ತು ಅಬ್ದುಲ್ ಖಾದರ್ ನಾವೂರು ಅವರ ಮಾರ್ಗದರ್ಶನದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಸುಮಾರು 15 ವರ್ಷಗಳಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಿ ಉದ್ಯೋಗದ ದಾರಿಯನ್ನು ತೆರೆದಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕ ತರಬೇತಿ ಮಾತ್ರವಲ್ಲದೆ, ಕಂಪ್ಯೂಟರ್, ಇಂಗ್ಲಿಷ್ ಸ್ಪೀಕಿಂಗ್, ಕಮ್ಯೂನಿಕೇಷನ್ ಸ್ಕಿಲ್ಸ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನೂ ನೀಡಲಾಗುತ್ತಿದ್ದು, ಧೈರ್ಯ, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ವೃದ್ಧಿಸುತ್ತಿದೆ.

ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳು ದೇಶ ಹಾಗೂ ವಿದೇಶಗಳಲ್ಲಿ ಉತ್ತಮ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದು, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಈ ಸಂಸ್ಥೆ ಹತ್ತಿರವಾಗಿದೆ. ಅವರಿಗೂ ಕಡಿಮೆ ಶುಲ್ಕದಲ್ಲಿ ಡಿಪ್ಲೋಮಾ ಹಾಗೂ ಪಿಜಿ ಡಿಪ್ಲೋಮಾ ತರಬೇತಿಗಳನ್ನು ನೀಡುತ್ತಿದ್ದು, ಉದ್ಯೋಗ ಅಥವಾ ಸ್ವಾವಲಂಬನೆಗೆ ಪ್ರೇರಣೆ ನೀಡುತ್ತಿದೆ.

ಕಾಲೇಜಿನಲ್ಲಿ ಲಭ್ಯವಿರುವ ಪ್ರಮುಖ ಕೋರ್ಸ್ ಗಳು: ಡಿಪ್ಲೋಮಾ ಫ್ಯಾಶನ್ ಡಿಸೈನಿಂಗ್, ಡಿಪ್ಲೋಮಾ ಟೀಚರ್ಸ್ ಟ್ರೈನಿಂಗ್, ಡಿಪ್ಲೋಮಾ ಎಸಿ ಮತ್ತು ರೆಫ್ರಿಜಿರೇಟರ್ ಮೆಕ್ಯಾನಿಕ್, ಡಿಪ್ಲೋಮಾ ಫೈರ್ ಅಂಡ್ ಸೇಫ್ಟಿ, ಏರೋನಾಟಿಕಲ್ & ಮರೈನ್ ಸೇಫ್ಟಿ ಇಂಜಿನಿಯರಿಂಗ್. ಈ ಕೋರ್ಸ್ ಗಳು ಬೆಳ್ತಂಗಡಿಯ ಶ್ರೀರಾಮ ಕಾಂಪ್ಲೆಕ್ಸ್ (ಸಂತೆಕಟ್ಟೆ) ಮತ್ತು ಮಂಗಳೂರು – ಮುಡಿಪು ಎಸ್. ಕೆ.ಟವರ್ ನ ಕಾಲೇಜಿನಲ್ಲಿದ್ದು, ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಿ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8861112182/8431882182 ಗೆ ಕರೆಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Related posts

ಬಂದಾರು ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಇಳಂತಿಲ :ಶ್ರೀ ಕೇಶವ ಶಿಶು ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 1 ಲಕ್ಷ ನೆರವು

Suddi Udaya

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ ಕಾರ್ಯಾಗಾರ

Suddi Udaya

ಪಟ್ರಮೆ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ

Suddi Udaya

ಬಿಜೆಪಿ ನಾವೂರು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಪ್ರದೀಪ್ ನಾಗಜೆ ಆಯ್ಕೆ

Suddi Udaya

ಸೋಣಂದೂರು ಸ.ಹಿ.ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya
error: Content is protected !!