19.8 C
ಪುತ್ತೂರು, ಬೆಳ್ತಂಗಡಿ
November 26, 2024
ಗ್ರಾಮಾಂತರ ಸುದ್ದಿಚಿತ್ರ ವರದಿ

ಮಚ್ಚಿನ ಸ. ಪ್ರೌ.ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಯೋಗಿಶ್. ಎಸ್ ರವರಿಗೆ ಬೀಳ್ಕೊಡುಗೆ

ಮಚ್ಚಿನ : “ತನ್ನ ನೋಡಲಿ ಎಂದು ಕನ್ನಡಿ ತಾ ಕರೆಯುವುದೇ, ತನ್ನಲ್ಲಿ ಜ್ಞಾನ ಉದಿಸಿದ ಮಹಾತ್ಮನು ಜಗಕೆ ಕನ್ನಡಿಯು ಸರ್ವಜ್ಞ.” ಒಂದು ಯೋಜನಾ ಬದ್ಧ ಗುರಿ ,ದೃಢ ನಿರ್ಧಾರ, ನಿಸ್ವಾರ್ಥ ಸೇವಾ ಮನೋಭಾವನೆ ,ತಂತ್ರಜ್ಞಾನ ಅಳವಡಿಸಿ ವಿದ್ಯಾರ್ಥಿ ಸ್ನೇಹಿ ಶಿಕ್ಷಣವನ್ನು ನೀಡುವ ಗುರಿಯನ್ನಿಟ್ಟುಕೊಂಡ ಆದರ್ಶ ಶಿಕ್ಷಕರು ಯೋಗಿಶ .ಎಸ್ ಈ ಹಿಂದೆ ಮುದ್ದೇನಹಳ್ಳಿಯ ಸತ್ಯ ಸಾಯಿ ಶಿಕ್ಷಣ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು , ಸರಕಾರಿ ಪ್ರೌಢಶಾಲೆ ಮಚ್ಚಿನ ಇಲ್ಲಿಗೆ ಸಮಾಜ ವಿಜ್ಞಾನ ಪಾಠ ಬೋಧಕರಾಗಿ ನೇಮಕಗೊಂಡು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಶಾಲೆಯನ್ನು ಅಭಿವೃದ್ಧಿಪಡಿಸಲು ತನ್ನ ಸಹೋದ್ಯೋಗಿಗಳ ಜೊತೆಗೆ ನಿರಂತರವಾಗಿ ಶ್ರಮಿಸಿದ್ದು, ಶಾಲೆಯ ಸೌಂದರ್ಯ ಹೆಚ್ಚಿಸುವಲ್ಲಿ ಕಾರಣಕರ್ತರಾಗಿದ್ದಾರೆ.


ವಿದ್ಯಾರ್ಥಿಗಳೊಂದಿಗೆ ಸ್ನೇಹ ಭಾವ ಹೊಂದಿದ್ದು, ಸರಳ ಆದರ್ಶ ಜೀವನವನ್ನು ನಡೆಸುವುದರ ಜೊತೆಗೆ ಶಿಸ್ತುಯುತ ನಡೆ-ನುಡಿ ಹಾಗೂ ವಿದ್ಯಾರ್ಥಿಗಳಿಗೆ ಪ್ರೀತಿಯ ಮಾದರಿ ಶಿಕ್ಷಕರು ಇವರಾಗಿದ್ದಾರೆ. ಸದಾ ಅಧ್ಯಯನಶೀಲರಾಗಿದ್ದು, ವಿದ್ಯಾರ್ಥಿಗಳು ಗ್ರಂಥಾಲಯ ಓದಲು ಪ್ರೇರೇಪಿಸುವರು ಇವರಾಗಿರುತ್ತಾರೆ .ಪರಿಸರ ಪ್ರೇಮಿ ಯಾಗಿರುವ ಇವರು ಶಾಲೆಯ ಉದ್ಯಾನವನ ಶಾಲಾ ಪರಿಸರದಲ್ಲಿ ಗಿಡಗಳ ನೆಡುವ ಕಾರ್ಯ ಚಟುವಟಿಕೆಯನ್ನು ಮಾಡುತ್ತಿದ್ದಾರೆ.

ಸಂವಿಧಾನ ದಿನಾಚರಣೆ ಕ್ವಿಜ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಬಹುಮಾನಗಳಿಸಲು ಮಾರ್ಗದರ್ಶನ ನೀಡಿರುತ್ತಾರೆ.

ಇದೀಗ ಅವರು ಮಂಡ್ಯ ಜಿಲ್ಲೆಯ ವಿಠಲಾಪುರ ಸರಕಾರಿ ಪ್ರೌಢ ಶಾಲೆಗೆ ಸಮಾಜ ವಿಜ್ಞಾನ ಶಿಕ್ಷಕರಾಗಿ ವರ್ಗಾವಣೆ ಹೊಂದಿದ್ದು ,ಅವರನ್ನು ನಿನ್ನೆ ಶಾಲಾ ಶಿಕ್ಷಕವೃಂದ, ಶಾಲಾ ಎಸ್ ಡಿ. ಎಂ. ಸಿ ಸಮಿತಿ , ಪೋಷಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಗೌರವತವಾಗಿ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್ .ಡಿ.ಎಂ.ಸಿಯ ಕಾರ್ಯಾಧ್ಯಕ್ಷರಾದ ರುಕ್ಮಯ ಬಾಳಿಂಜ , ಶಾಲಾ ಮುಖ್ಯೋಪಾಧ್ಯಾಯರಾದ ಪ್ರಕಾಶ್. ಎಸ್. ನಾಯ್ಕ್, ಶಿಕ್ಷಣ ತಜ್ಞರಾದ ಡಾಕ್ಟರ್ ಮಾಧವ ಶೆಟ್ಟಿ ಶಾಲಾ ಅಧ್ಯಾಪಕ ವೃಂದ, ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

Suddi Udaya

ನಡ ಪ್ರೌಢಶಾಲೆಯಲ್ಲಿ ತಾಲೂಕು ಶಿಕ್ಷಕರ ಸಮಾಲೋಚನ ಸಮಾರಂಭ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಮನ್ ಶರ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕೆ ಆಯ್ಕೆ

Suddi Udaya

ಮರೋಡಿ ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ಕೊಯ್ಯೂರು ಕ್ರಾಸ್ ನಿಂದ ಅರ್ಬಿ ಕಿರಿಯಾಡಿ, ಗಾಂಧಿನಗರ, ಕಾಶಿಬೆಟ್ಟು ಸಂಪರ್ಕಿಸುವ ಮಣ್ಣಿನ ರಸ್ತೆ ಸಂಪೂರ್ಣ ಕೆಸರುಮಯ: ಶೀಘ್ರವಾಗಿ ದುರಸ್ಥಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!