22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ರಂಗಪೂಜೆ

ಪುದುವೆಟ್ಟು: ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಮಿಯ್ಯಾರು ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುದುವೆಟ್ಟು ವಿಭಾಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಫೆ.7 ಹಾಗೂ 8ರಂದು ವಾರ್ಷಿಕ ಜಾತ್ರಾಮಹೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಮತ್ತು ರಂಗಪೂಜೆ ಜರುಗಿತು.

ಫೆ. 8ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೊಮ್ಮಣ್ಣ ಗೌಡ ಮಠ ವಹಿಸಿದ್ದರು. ಧಾರ್ಮಿಕ ಪ್ರವಚನವನ್ನು ಲಕ್ಷ್ಮೀಶ ಭಟ್ ಗಬಲಡ್ಕ ನೀಡಿದರು. ಮುಖ್ಯ ಅತಿಥಿಗಳಾಗಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಬೆಳ್ತಂಗಡಿ ಸೇವಾ ಭಾರತಿ ಅಧ್ಯಕ್ಷೆ ಸ್ವರ್ಣ ಗೌರಿ, ಲಾಯಿಲ ಸ್ವಾಮಿ ಪ್ರಸಾದ್ ಕನ್‌ಸ್ಟ್ರಕ್ಷನ್ಸ್ ನ ನಾಗೇಶ್ ಕುಮಾರ್ ಗೌಡ, ಮಿಯ್ಯಾರು ವನದುರ್ಗಾ ದೇವಸ್ಥಾನದ ಗೌರವಾಧ್ಯಕ್ಷ ರಮೇಶ್ ಪ್ರಭು, ರಮೇಶ್ ರಾವ್ ಮಾಂಜೀಲು, ಡೆವಲಪ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಶ್ರೀಪತಿ ಹೆಬ್ಬಾರ್, ಗ್ರಾ. ಪಂ. ಅಧ್ಯಕ್ಷ ಪೂರ್ಣಕ್ಷಾ, ಜಿ. ಪಂ. ಮಾಜಿ ಸದಸ್ಯೆ ನಮಿತಾ ಪೂಜಾರಿ ಆಗಮಿಸಿದ್ದರು.

ವೇದಿಕೆಯಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ಮೋಹಿನಿ ಧರ್ಮರಾಜ್, ಪೂಜಾ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ವಾಣಿ ಪ. ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡ ಡೆಚ್ಚಾರು ದಂಪತಿಗಳನ್ನು, ಸಿಟಿಡಿ ಮಣ್ಣಗುಂಡಿ ಉಪ ವಲಯಾರಣ್ಯಾಧಿಕಾರಿ ಎಂ. ಯತಿಂದ್ರ ದಂಪತಿಗಳನ್ನು ಸನ್ಮಾನಿಸಲಾಯಿತು.


ವೇದಿಕಾ ಮತ್ತು ತಂಡದವರು ಪ್ರಾರ್ಥಿಸಿದರು. ಶಿಕ್ಷಕ ಸುರೇಶ್ ಕೆ. ಆರ್. ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಸಂತೋಷ್ ಕೆ. ಸಿ. ವರದಿ ವಾಚಿಸಿದರು. ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ನಿಶಾಂತ್ ಧನ್ಯವಾದವಿತ್ತರು.

ಫೆ.7ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ, ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಮಹಾಮಂಗಳಾರತಿ, ಮಧ್ಯಾಹ್ನ ಶ್ರೀ ವನದುರ್ಗಾ ದೇವಿಯ ಮಹಾಪೂಜೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಹಿಪ್-ಬಾಯ್ಸ್ ನೃತ್ಯ ತಂಡ ಉಜಿರೆ ಇವರಿಂದ ನೃತ್ಯ ಕಾರ್ಯಕ್ರಮ, ಅಪ್ಪೆ ಬ್ರಾಹ್ಮರಿ, ರಾತ್ರಿ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು.

ಫೆ.8ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪುದುವೆಟ್ಟು ಗ್ರಾಮದ ಪ್ರತಿಭಾನ್ವಿತರಿಂದ ಸಾಂಸ್ಕೃತಿಕ ವೈವಿಧ್ಯ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಭಜನಾ ಕಮ್ಮಟೋತ್ಸವ ಜರುಗಿತು.

Related posts

ಬೆಳ್ತಂಗಡಿ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿರುವ ಸಾಕ್ಷಿ ದೂರು ದಾರ: ಇಂದು ಮಂಗಳೂರಿನಲ್ಲಿ ಡಿಐಜಿ ಅನುಚೇತ್ ಮುಂದೆ ಹೇಳಿಕೆ ನೀಡಲು ಹಾಜರು

Suddi Udaya

ಈದ್ ಹಬ್ಬದ ಪ್ರಯುಕ್ತ ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಶೇ.20 ಡಿಸ್ಕೌಂಟ್ ಸೇಲ್: ಶಾಲಾ ಮಕ್ಕಳ ಬುಕ್ಸ್, ಬ್ಯಾಗ್‌ಗಳು, ಕೊಡೆ, ಸ್ಟೇಷನರಿ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯ

Suddi Udaya

ಪ್ರೊ.ಎಸ್ ಪ್ರಭಾಕರ್ ನಿಧನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ

Suddi Udaya

ನ.1:ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ‘ಜೈ ಭಜರಂಗ ಬಲಿ’ ನಾಟಕ ಮತ್ತೊಮ್ಮೆ ಪ್ರದರ್ಶನ

Suddi Udaya

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ: ಧಾರ್ಮಿಕ ಚಿಂತಕ ನಿರಂಜನ್ ಜೈನ್ ಕುದ್ಯಾಡಿ ಹಾಗೂ 20 ಮಂದಿ ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

Suddi Udaya
error: Content is protected !!