
ಕಳೆಂಜ: ಸುದೀರ್ಘ 39 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಾಬಲ ಕಾಂತ್ರೇಲು ಮತ್ತು 31 ವರ್ಷಗಳ ಕಾಲ ಹಿರಿಯ ಪಶು ವೈದ್ಯ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಯಾದವ ಗೌಡರವರನ್ನು ಕಳೆಂಜ ಗ್ರಾ.ಪಂ. ವತಿಯಿಂದ ಆ.10ರಂದು ಗೌರವಿಸಲಾಯಿತು.
ಮಹಾಬಲ ಕಾಂತ್ರೇಲು ಅವರು 1983ರಂದು ಸೇವೆಗೆ ಸೇರಿದ್ದು, ಸಿಪಾಯಿ, ಲ್ಯಾನ್ಟ್ ನಾಯಕ್, ನಾಯಕ್ , ಹವಾಲ್ದಾರ, ನಾಯಕ್ಸ್ ಸುಬೇದಾರ್ ರಾಗಿ ಡೆಲ್ಲಿ, ರಾಜಸ್ಥಾನ್, ಪಂಜಾಬ್, ಹರಿಯಾಣ, ಗುಜರಾತ್, ಜಮ್ಮು-ಕಾಶ್ಮೀರ್, ಲಡಾಖ್ ಬೆಂಗಳೂರು ಹೀಗೆ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿ ಜೂ.30ರಂದು ಸುಬೇದಾರ್ ರಾಗಿ ನಿವೃತ್ತರಾದರು.
ಇನ್ನೋರ್ವ ಮುಖ್ಯ ವ್ಯಕ್ತಿ ಯಾದವ ಗೌಡ ರವರು 31 ವರ್ಷ 6 ತಿಂಗಳು ಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದರು. ಇವರು ವೆಟರಿನರಿ ಡಿಪ್ಲೋಮ ವಿದ್ಯಾಭ್ಯಾಸ ಮುಗಿಸಿ ಕಿರಿಯ ಪಶು ವೈದ್ಯ ಪರೀಕ್ಷಕರು, ಹಿರಿಯ ಪಶು ವೈದ್ಯ ಪರೀಕ್ಷಕರಾಗಿ ಜಿಲ್ಲಾ ಉಪ ನಿರ್ದೇಶಕರ ಕಛೇರಿ ಮಂಗಳೂರು, ಪಶು ವೈದ್ಯ ಆಸ್ಪತ್ರೆ ಮಂಗಳೂರು, ವಿ.ಹೆಚ್. ಧರ್ಮಸ್ಥಳ, ಪಿ.ವಿ.ಸಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಅರಸಿನಮಕ್ಕಿ-ಕಳೆಂಜ ಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷ ವಿಶ್ವನಾಥ ಗೌಡ, ಪಂ. ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ, ಕಾರ್ಯದರ್ಶಿ ಹೊನ್ನಪ್ಪ, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಗಂಗಾಧರ್ ಕೆ. ಕಾರ್ಯಕ್ರಮ ನಿರೂಪಿಸಿದರು.