25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ಹಾಡು ಹಗಲೇ ಲಾಯಿಲದ ದೇಜಪ್ಪರ ಮನೆಗೆ ನುಗ್ಗಿದ ಕಳ್ಳರು: ರೂ.20 ಸಾವಿರ ನಗದು ಸಹಿತ ರೂ.40 ಸಾವಿರ ಮೌಲ್ಯದ ಚಿನ್ನಾಭರಣ ಕಳವು

ಬೆಳ್ತಂಗಡಿ : ಹಾಡು ಹಗಲೇ
ಲಾಯಿಲ ಗ್ರಾಮದ ನಿವಾಸಿ ದೇಜಪ್ಪ ಎಂಬವರ ಮನೆಗೆ ನುಗ್ಗಿದ ಕಳ್ಳರು ರೂ.20 ಸಾವಿರ ನಗದು ಸಹಿತ ಚಿನ್ನಾಭರಣ ಕಳವುಗೈದ ಘಟನೆ ಆ.10ರಂದು ವರದಿಯಾಗಿದೆ.
ಆ.10 ರಂದು ಬೆಳಿಗ್ಗೆ 8.30 ರಿಂದ ಸಂಜೆ 5.30ರ ಅವಧಿಯಲ್ಲಿ ದೇಜಪ್ಪರ ಮನೆಯಲ್ಲಿ ಯಾರು ಇಲ್ಲದ ವೇಳೆ ಯಾರೋ ಕಳ್ಳರು ಮನೆಯ ಬಲಬದಿ ಇರುವ ಸ್ಟೋರ್ ರೂಂ ನಿಂದ ಮರದ ಕಿಟಕಿಯನ್ನು ಯಾವುದೋ ಆಯುಧದಿಂದ ಮುರಿದು ಗೋಡ್ರೇಜ್ ನ ಬೀಗವನ್ನು ಅಲ್ಲಿಯೇ ಇಟ್ಟಿದ್ದ ಕೀಯಿಂದ ಲಾಕ್ ತೆಗೆದು ಗೊಡ್ರೇಜಿನಲ್ಲಿ ಇಟ್ಟಿರುವ ಸುಮಾರು ರೂ.20 ಸಾವಿರ ನಗದು ಮತ್ತು ಸುಮಾರು 8 ಗ್ರಾಂ ತೂಕದ ಚಿನ್ನಾಭರಣ ಅಂದಾಜು ಮೌಲ್ಯ ಸುಮಾರು 40ಸಾವಿರ ವನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.
. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 73/2023 ಕಲಂ;454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಗುರುವಾಯನಕೆರೆ ಶಕ್ತಿನಗರದ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್: ಬೈಕ್ ಸವಾರ ಸಾವು

Suddi Udaya

ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ವ್ಯಕ್ತಿ ಆತ್ಮಹತ್ಯೆ

Suddi Udaya

ಬೆಳ್ತಂಗಡಿಯ ಮೂರು ವಕೀಲರ ಕಚೇರಿಗೆ, ಒಂದು ಇಂಜಿನಿಯರ್ ಆಫೀಸ್‌ಗೆ ಕುಂಕುಮ ?

Suddi Udaya

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ತಿಮರೋಡಿ ನಿರೀಕ್ಷಣಾ ಜಾಮೀನು ಆದೇಶ ಮುಂದೂಡಿಕೆ

Suddi Udaya

ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಅನನ್ಯ ಭಟ್ ನಾಪತ್ತೆ ಎಂಬ ವಿಷಯವೇ ಸುಳ್ಳು: ಸುಜಾತ ಭಟ್ ಸ್ವಷ್ಟನೆ

Suddi Udaya

ಹಲವಾರು ಮೃತದೇಹ ಹೂತು ಹಾಕಿದ ದೂರು ಪ್ರಕರಣ: ಧರ್ಮಸ್ಥಳ ಗ್ರಾ.ಪಂ.ಯಿಂದ ದಾಖಲೆ ಪಡೆದ ಎಸ್ ಐಟಿ

Suddi Udaya
error: Content is protected !!