September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಭಾರತಿ ಶಿಶುಮಂದಿರದಲ್ಲಿ ಭಗವದ್ಗೀತೆಯ ಕಲಿಕಾ ತರಗತಿ ಉದ್ಘಾಟನೆ

ವೇಣೂರು ಭಾರತಿ ಶಿಶುಮಂದಿರದಲ್ಲಿ ಸೇವಾ ಶರಧಿ ವಿಶ್ವಸ್ಥ ಮಂಡಳಿ, ಮಹಿಳಾ ಮಂಡಲ ,ಯುವತಿ ಮಂಡಲ ಇದರ ಸಂಯುಕ್ತ ಆಶ್ರಯದಲ್ಲಿ ಭಗವದ್ಗೀತೆಯ ಕಲಿಕಾ ತರಗತಿಯು ಇತ್ತೀಚೆಗೆ ಉದ್ಘಾಟನೆಗೊಂಡಿತು.

ಅಧ್ಯಕ್ಷತೆಯನ್ನು ಸೇವಾ ಶರಧಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಭಾಸ್ಕರ್ ಪೈ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೀತಾಜ್ಞಾನ ಯಜ್ಞದ ಶಿಕ್ಷಕಿಯರಾದ ಮಮತೇಶ್ವರಿ ಭಟ್ ಮತ್ತು ರೇಣುಕಾ ಪುಣಚ ಕಾರ್ಯಕ್ರಮಕ್ಕೆ ಶುಭಹಾರೈಸಿ ಗೀತಾಭ್ಯಾಸಿಗಳಿಗೆ ಗೀತೆಯ ಮಹತ್ವವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಎಲ್ಲರಿಗೂ ಭಗವದ್ಗೀತೆ ಪುಸ್ತಕವನ್ನು ವಿತರಿಸಲಾಯಿತು. ಕು| ಸ್ಪೂರ್ತಿ ಭಟ್ ಪ್ರಾರ್ಥಿಸಿ, ಶ್ರೀ ಮತಿ ಅಮಿತಾ ಶೇಖರ್ ಸ್ವಾಗತಿಸಿದರು. ಶ್ರೀಮತಿ ಪ್ರತಿಭಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮಮತಾ ಗಿರೀಶ್ ಧನ್ಯವಾದವಿತ್ತರು.

Related posts

ಜು12:ಯುವವಾಹಿನಿ ಬೆಳ್ತಂಗಡಿ ಘಟಕದ ಪದಪ್ರದಾನ ಸಮಾರಂಭ: ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ಹಾಗೂ ಸಾಂತ್ವನ ನಿಧಿ ವಿತರಣೆ

Suddi Udaya

ರಾವ್ ಒಪ್ಟಿಕಲ್ಸ್ ಮಾಲಕ ಅಶೋಕ್ ಎಲ್. ರಾವ್ ನಿಧನ

Suddi Udaya

ಅಳದಂಗಡಿ: ಇತ್ತೀಚೆಗೆ ಭಾರಿ ಗಾಳಿ , ಮಳೆಗೆ ಕುಸಿತಗೊಂಡ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ: ತಾತ್ಕಾಲಿಕ ಮನೆ ದುರಸ್ತಿಗೆ ನೆರವು

Suddi Udaya

ನಡ : ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದಲ್ಲಿ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ

Suddi Udaya

ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾವೀರ ಅರಿಗ, ಉಪಾಧ್ಯಕ್ಷರಾಗಿ ತುಕಾರಾಮ್ ಬಿ.

Suddi Udaya
error: Content is protected !!