April 2, 2025
ಅಪರಾಧ ಸುದ್ದಿ

ಚಾಮಾ೯ಡಿ : ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆ- ಜಾನುವಾರು ಸಹಿತ ಓವ೯ಬಂಧನ

ಚಾರ್ಮಾಡಿ : ಮಾಂಸಕ್ಕಾಗಿ ಅಕ್ರಮವಾಗಿ ವಾಹನದಲ್ಲಿ ಜಾನುವಾರು ಸಾಗಾಟದ ಪ್ರಕರಣವನ್ನು ಧಮ೯ಸ್ಥಳ ಪೊಲೀಸರು ಪತ್ತೆ ಹಚ್ಚಿ ಓವ೯ನನ್ನು ಬಂಧಿಸಿದ ಘಟನೆ ಆ.13 ರಂದು ವರದಿಯಾಗಿದೆ.
ಚಾಮಾ೯ಡಿ ಚೆಕ್ ಪೋಸ್ಟ್ ಬಳಿ ಅತಿವೇಗದಲ್ಲಿ ಕೆ ಎ 18 ಸಿ 2855 ನೇ ನೊಂದಣಿ ಸಂಖ್ಯೆಯ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಜಾನುವಾರಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾಗ ಧರ್ಮಸ್ಥಳ ಠಾಣಾ ಪೊಲೀಸರು ತಡೆದಿದ್ದು, ಈ ವೇಳೆ ಬಂಟ್ವಾಳ ಸಾಲೆತ್ತೂರು ನಿವಾಸಿ ಹಮೀದ್ ಎಂಬಾತನು ಪರಾರಿಯಾಗಿರುತ್ತಾನೆ. ಸದರಿ ವಾಹನದ ಚಾಲಕನನ್ನು ವಿಚಾರಿಸಿದಾಗ ,ಆತ ಮೂಡಿಗೆರೆ ಕೂಡಹಳ್ಳಿ ಗ್ರಾಮದ ಕೆ .ಕೆ ಪದ್ಮೇಶ್ (41ವ) ಎಂಬುದಾಗಿ ತಿಳಿದುಬಂದಿದೆ., ವಾಹನವನ್ನು ಪರಿಶೀಲಿಸಲಾಗಿ 3 ಜಾನುವಾರುಗಳು ಪತ್ತೆಯಾಗಿದೆ . ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 57/2023 ಕಲಂ: 5,7,8,9,12 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ -2020 ಮತ್ತು ಕಲಂ:66 ಜೊತೆಗೆ 192(ಎ) ಐ ಎಂ ವಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ವೇಣೂರು: ಬರ್ಕಜೆ ದೆತ್ತರ ನದಿಗೆ ಸ್ನಾನಕ್ಕೆ ತೆರಳಿದ ಮೂವರು ವಿದ್ಯಾರ್ಥಿಗಳು ನೀರುಪಾಲು

Suddi Udaya

ಉಜಿರೆ: ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ತೆಕ್ಕಾರು: ಗಾಂಜಾ ನಶೆಯಲ್ಲಿ ಅನುಚಿತ ವರ್ತನೆ: ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya

ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಗಳು- ಮಹಿಳೆಗೆ ರೂ. 20. 29 ಲಕ್ಷಕ್ಕೂ ಮಿಕ್ಕಿ ವಂಚನೆ

Suddi Udaya

ಸವಣಾಲಿನಲ್ಲಿ ಬೈಕ್- ಬೈಕ್ ನಡುವೆ ಅಪಘಾತ : ಆಳದಂಗಡಿ ಹಾ.ಉ.ಸ.ಸಂಘದ ಮಾಜಿ ಕಾರ್ಯದರ್ಶಿ ಹೆನ್ರಿ ಡಿ’ ಸೋಜ ಮೃತ್ಯು

Suddi Udaya

ಕಲ್ಮಂಜ ನಿಡಿಗಲ್‌ನಲ್ಲಿ ಭೀಕರ ವಾಹನ ಅಪಘಾತ ಬೈಕ್‌ ಮತ್ತು ಸ್ಕಾಪಿ೯ಯೋ ನಡುವೆ ಅಪಘಾತ

Suddi Udaya
error: Content is protected !!