ಉಜಿರೆ: ಆಟಿಯ ವಿಶೇಷತೆಯನ್ನು ಸಾಂಕೇತಿಕವಾಗಿ ತಿಳಿಯಲು ಶಾಲೆಯು ಉತ್ತಮ ವೇದಿಕೆಯಾಗಿದೆ. ಹೀಗೆ ನಮ್ಮ ಸಂಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯಬೇಕು”ಎಂದು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಸರ್ ಇವರು ಹೇಳಿದರು.
ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆಯಲ್ಲಿ ಆ.12ರಂದು ಆಯೋಜಿಸಲಾಗಿದ್ದ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಇನ್ನೊರ್ವ ಅತಿಥಿಗಳಾದ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ್ ಶೆಟ್ಟಿ ಇವರು ತುಳುನಾಡ ಸಂಪ್ರದಾಯ, ಅಂದಿಗೂ ಇಂದಿಗೂ ಜನಜೀವನದಲ್ಲಾಗಿರುವ ಬದಲಾವಣೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಆಟಿ ಕಳೆಂಜ ಕುಣಿತ, ತುಳುನಾಡಿನ ಒಗಟುಗಳ ಸ್ಪರ್ಧೆ, ಆಟಿಯ ವಿವಿಧ ಬಗೆಯ ತಿನಿಸುಗಳ ಮತ್ತು ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ, ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸೋಮಶೇಖರ್ ಶೆಟ್ಟಿ, ಎಸ್.ಡಿ.ಎಮ್ ವಸತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ಇವರು ಉಪಸ್ಥಿತರಿದ್ದರು.
ಶಿಕ್ಷಕಿ ಶೋಭಿತ ನಿರೂಪಣೆ ಮಾಡಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಭವ್ಯ ಸ್ವಾಗತಿಸಿ, ಶಿಕ್ಷಕಿ ಸವಿತಾ ವೇದಪ್ರಕಾಶ್ ವಂದಿಸಿದರು.