September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬ್ರೈಟ್ ಇಂಡಿಯಾ, ಮದ್ದಡ್ಕ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

ಉಜಿರೆ: ವಿಕಲಾಂಗರಲ್ಲಿ ವಿಶೇಷಚೇತನ ಮತ್ತು ಪ್ರತಿಭೆ ಇದ್ದು, ತಮಗೆ ಸಿಗುವ ಅವಕಾಶಗಳು ಮತ್ತು ಸೌಲಭ್ಯಗಳ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್, ಎಸ್.ಎಸ್. ಹೇಳಿದರು.


ಅವರು ಫೆ.1 ರಂದು ಉಜಿರೆಯಲ್ಲಿ ಟಿ.ಬಿ. ಆಸ್ಪತ್ರೆ ಆವರಣದಲ್ಲಿರುವ ಜಾಗೃತಿಸೌಧದಲ್ಲಿ ಮದ್ದಡ್ಕದಲ್ಲಿರುವ ಬ್ರೈಟ್ ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ವಿಕಲಚೇತನರಿಗೆ ಸಾಧನಾ ಸಲಕರಣೆಗಳನ್ನು ವಿತರಿಸಿ ಶುಭ ಹಾರೈಸಿದರು.


ವಿಕಲಚೇತನರು ಒಲಿಂಪಿಕ್ಸ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಕೀಳರಿಮೆ ತೊರೆದು ಬದುಕಿನಲ್ಲಿ ನವಚೈತನ್ಯದಿಂದ ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಮನೆಯಲ್ಲಿ ಹಾಗೂ ಸಮಾಜದಲ್ಲಿ  ಸ್ವಾವಲಂಬಿ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ “ವಾತ್ಸಲ್ಯ”  ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಕಿಟ್‌ಗಳ ಮೂಲಕ ಬಟ್ಟೆ, ಪೌಷ್ಠಿಕಆಹಾರ ಮೊದಲಾದ ಮೂಲಭೂತ ಸೌಲಭ್ಯಗನ್ನು ಒದಗಿಸಲಾಗಿದೆ. ಇಪ್ಪತ್ತು ಸಾವಿರ ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದೆ ಎಂದರು.
ಸಾಧನಾ ಸಲಕರಣೆಗಳ ವಿತರಣೆ: ಗಾಲಿಕುರ್ಚಿ: 8, ಊರುಗೋಲು: 6, ವಾಕರ್:6, ಎಲ್ಬೊ ಕ್ಲಚ್: 9 ವಾಟರ್‌ಬೆಡ್: 4, ಒಟ್ಟು 33 ಮಂದಿ ವಿಕಲಚೇತನರಿಗೆ ಸಾಧನಾಸಲಕರಣೆಗಳನ್ನು ವಿತರಿಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್‌ ಪಾಯಸ್, ಬ್ರೈಟ್ ಇಂಡಿಯಾದ ಸದಸ್ಯ ಜಯಶಂಕರ ಶರ್ಮಾ ಉಪಸ್ಥಿತರಿದ್ದರು.


ಬ್ರೈಟ್ ಇಂಡಿಯಾದ ಕೋಶಾಧಿಕಾರಿ ಶಿಶುಪಾಲ ಪೂವಣಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಜ್ರನಾಭಯ್ಯ ಧನ್ಯವಾದವಿತ್ತರು.

Related posts

ನಾಲ್ಕೂರು: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವಾಹನ ಪೂಜೆ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರೋವರ್ಸ್ – ರೇಂಜರ್ಸ್ ಘಟಕ ಹಾಗೂ ವಾಣಿಜ್ಯ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಸರಳಿಕಟ್ಟೆ ಪ್ರೌಢಶಾಲೆಯಲ್ಲಿ ಯುವ ಸಂಸತ್ತು ಚುನಾವಣೆ

Suddi Udaya

ಹುತ್ತಕ್ಕೆ ಕೈ ಹಾಕಿ ಜೇನು ತೆಗೆಯುವ ವೇಳೆ ವಿಷ ಜಂತು ಕಚ್ಚಿದ ಶಂಕೆ : ಚಿಕಿತ್ಸೆ ಪಡೆಯದೆ ವ್ಯಕ್ತಿ ಮೃತ್ಯು

Suddi Udaya

ಉಜಿರೆ ಶ್ರೀ ವನದುರ್ಗಾ, ಶ್ರೀ ನಾಗ ರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ಅಯೋಧ್ಯೆ ಸಂಭ್ರಮಾಚರಣೆ ಕ್ಷೇತ್ರದ ದೇವರಿಗೆ ವಿಶೇಷ ಪೂಜೆ, ರಾಮನಾಮ ತಾರಕ ಮಂತ್ರ ಹೋಮ, ಭಜನೆ ಸಂಕೀರ್ಣತೆ

Suddi Udaya

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ – ಭಾರತ ಮತ್ತು ಜಪಾನ್

Suddi Udaya
error: Content is protected !!