September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

ಕೊಯ್ಯೂರು: ಕೊಯ್ಯೂರಿನ ಸರಕಾರಿ ಶಾಲೆ ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನೆ ನೆರವೇರಿತು.


ಶಾಲಾ ಪ್ರಧಾನ ಪೋಷಕರು ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅಶೋಕ್ ಭಟ್ ಅಗ್ರಸಾಲೆ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಧಾಕರ ದೇವಾಡಿಗ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಶಾಲಾಕ್ಷಿ, ಶಾರದಾ, ಯಕ್ಷಗಾನ ನಾಟ್ಯ ಗುರುಗಳಾದ ದೇವಿ ಪ್ರಸಾದ್ ಗುರುವಾಯನಕೆರೆ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಜಯಂತಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಾಲಾ ಪೋಷಕರು, ಹಳೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಸಮಾಜ ಕಾರ್ಯ ವಿಭಾಗದಿಂದ ಆರ್ಥಿಕ ಶಿಸ್ತು ಕುರಿತು ಸಂವಾದ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ‘ ನಮ್ಮ ನಡಿಗೆ ಡಿಜಿಟಲ್ ಕಡೆಗೆ ‘ ಡಿಜಿಟಲ್ ಸಾಕ್ಷರತಾ ಜಾಗೃತಿ ಕಾರ್ಯಕ್ರಮ

Suddi Udaya

ಕಳಿಯ : ಬಾಕಿಮಾರು ಮನೆಯ ಸುರೇಶ್ ಗೌಡ ನಿಧನ

Suddi Udaya

ಕಾಂಗ್ರೆಸ್ ಸರ್ಕಾರ ಬಂದ ನಂತರ ಅಭಿವೃದ್ಧಿ ಶೂನ್ಯ : ಪ್ರತಾಪ್ ಸಿಂಹ ನಾಯಕ್

Suddi Udaya

ಸಶಸ್ತ್ರ ಸೀಮಾ ಬಲ ಕೇಂದ್ರ ಪೋಲಿಸ್ ಹುದ್ದೆಗೆ ಆಯ್ಕೆಯಾದ ಗುರಿಪಳ್ಳದ ಅರ್ಚನಾ ಗೌಡ

Suddi Udaya

ಅಶೋಕ್ ಜೈನ್ ರವರಿಗೆ ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ ಸನ್ಮಾನ

Suddi Udaya
error: Content is protected !!