32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಾಜೂರು ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಾಜೂರು ಶಾಲಾ ವಠಾರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯು ನಡೆಯಿತು. ಕಾಜೂರು ದರ್ಗಾ ಸಮಿತಿ ಅಧ್ಯಕ್ಷರಾದ ಕೆ ಯು ಇಬ್ರಾಹಿಂ ದ್ವಜಾರೋಹಣಗೈದರು. ಸಯ್ಯಿದ್ ಝೈನುಲ್ ಆಬಿದ್ ಜಮಲುಲೈಲಿ ತಂಙಳ್ ರವರು ಶುಭ ಸಂದೇಶ ನೀಡಿ ಆಶಿರ್ವಚನ ಮಾಡಿದರು.

ಮುದರ್ರಿಸರಾದ ತೌಸೀಫ್ ಸಅದಿ ಹರೇಕಳ ಹಾಗೂ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಕ ಕೆ ಎಂ ಸಿದ್ದೀಕ್ ಮೋಂಟುಗೋಳಿ ಶುಭಕೋರಿದರು. ದರ್ಗಾ ಸಮಿತಿ ಪ್ರ.ಕಾರ್ಯದರ್ಶಿ ಹಾಗೂ ರಾಹ ಎಜ್ಯುಕೇಶನಲ್ ಟ್ರಸ್ಟ್ ಚೇರ್ಮನ್ ಜೆ ಹೆಚ್ ಅಬೂಬಕರ್ ಸಿದ್ದೀಕ್, ದರ್ಗಾ ಸಮಿತಿ ಕೋಶಾಧಿಕಾರಿ ಮಹಮ್ಮದ್ ಕಮಾಲ್, ರಾಹ ಎಜ್ಯುಕೇಶನ್ ಸಂಚಾಲಕರಾದ ಅಶ್ಫಾಕ್, ಫೈನಾನ್ಸ್ ಸೆಕ್ರೇಟರಿ ಆಸಿಫ್ ಜೆ.ಎಚ್, ಸದರ್ ಉಸ್ತಾದ್ ಜಮಾಲ್ ಲತೀಫಿ, ಆರ್.ಜೆ.ಎಂ ಕಾಜೂರು ಮಾಜಿ ಅಧ್ಯಕ್ಷರಾದ ಬಿ ಎ ಯೂಸುಫ್ ಶರೀಫ್ ಹಾಗೂ ದರ್ಗಾ ಸಮಿತಿಯ ಪದಾದಿಕಾರಿಗಳು, ನಿರ್ದೇಶಕರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ಸೆಸ್ಸೆಫ್, ಎಸ್ ವೈ ಎಸ್, ಅಂಗ ಸಂಸ್ಥೆಗಳಾದ ಸ್ವಲಾತ್ ಕಮಿಟಿ, ದಫ್ ಸಮಿತಿ, ಕೆ.ಡಿ.ಸಿ ಪದಾಧಿಕಾರಿಗಳು ಮತ್ತು ಸದಸ್ಯರು, ಕಾಜೂರು, ಕುಕ್ಕಾವು, ದಿಡುಪೆ ಮತ್ತು ಜಿ ನಗರ ಮದ್ರಸಗಳ ಆಡಳಿತ ಸಮಿತಿ, ಶಾಲಾ ಶಿಕ್ಷಕ-ರಕ್ಷಕ ಸಮಿತಿ ಮತ್ತು ಮದ್ರಸ ಶಿಕ್ಷಕ-ರಕ್ಷಕ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದರು. ಮದ್ರಸ, ದರ್ಸ್, ಪ್ರೌಢಶಾಲೆ, ಪಬ್ಲಿಕ್ ಸ್ಕೂಲ್, ಶರೀಅತ್ ಕಾಲೇಜು, ಪಿಯುಸಿ ಸಿಬ್ಬಂದಿ ವರ್ಗ, ಜಮಾಅತ್ ಭಾಂದವರು, ವಿದ್ಯಾರ್ಥಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ ರಾಹ ಪಬ್ಲಿಕ್ ಸ್ಕೂಲ್ ಇದರ ನೂತನ ಶಾಲಾ ವಾಹನ ಲೋಕಾರ್ಪಣೆ ಮಾಡಲಾಯಿತು.

Related posts

ದೇವಾಂಗ ಸಮಾಜ ಮುಂಡಾಜೆ ಘಟಕದ ತ್ರೈಮಾಸಿಕ ಸಭೆ

Suddi Udaya

ಧರ್ಮಸ್ಥಳ ಪೊಲೀಸ್ ಠಾಣೆಯ ಪಿ.ಎಸ್.ಐ ಅನಿಲ್ ಕುಮಾರ್ ವರ್ಗಾವಣೆ: ನೂತನ ಪಿಎಸ್ಐ ಆಗಿ ಕಿಶೋ‌ರ್.ಪಿ ನೇಮಕ

Suddi Udaya

ಕುವೆಟ್ಟು: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಶಂಕುಸ್ಥಾಪನೆ

Suddi Udaya

ಗುರುವಾಯನಕೆರೆ ನಿವಾಸಿ ಜಿ. ಅಬ್ದುಲ್ ಹಮೀದ್ ನಿಧನ

Suddi Udaya

ಸರ್ವರಿಗೂ ಹೊಸ ವರ್ಷದ ಶುಭಾಶಯಗಳು: ಪರಸ್ಪರ ಪ್ರೀತಿ-ವಿಶ್ವಾಸ, ಗೌರವದೊಂದಿಗೆ, ಶಾಂತಿ ಸಾಮರಸ್ಯ ಮೂಡಿಬರಲಿ, ಮಾನವೀಯತೆ ಮೆರೆಯಲಿ: ಡಾ. ಡಿ ವೀರೇಂದ್ರ ಹೆಗ್ಗಡೆ

Suddi Udaya

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆ

Suddi Udaya
error: Content is protected !!