30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್ ರವರಿಂದ ಯೋಗಾಸನ ಸ್ಪರ್ಧೆಗೆ ವಿದ್ಯಾರ್ಥಿಗಳಿಗೆ ಯೂನಿಪಾರ್ಮ್ ವಿತರಣೆ

ಉಜಿರೆ: ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ,ಸಮಾಜ ಸೇವಕ ಮೋಹನ್ ಕುಮಾರ್ ರವರು ಯೋಗಾಸನ ಸ್ಪರ್ಧೆಗೆ ಕಲ್ಮಂಜ ವಿದ್ಯಾರ್ಥಿಗಳಿಗೆ ಯೂನಿಪಾರ್ಮ್ ವಿತರಿಸಿದ್ದರು.

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಇತ್ತೀಚೆಗೆ ನಡ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನದಲ್ಲಿ 17 ರ ಒಳಗಿನ ವಯೋಮಾನದ ಕಲ್ಮಂಜ ಸರಕಾರಿ ಪ್ರೌಢ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ ತಾಲೂಕು ಮಟ್ಟದಲ್ಲಿ ಚಾಂಪಿಯನ್ ಶಿಪ್ ಪಡೆದು ಉಜಿರೆ ಉದ್ಯಮಿ ಮೋಹನ್ ಕುಮಾರ್ ಅವರನ್ನು ವಿದ್ಯಾರ್ಥಿಗಳು ಕನಸಿನ ಮನೆ ಉಜಿರೆಯಲ್ಲಿ ಬೇಟಿಯಾಗಿ ಆಶೀರ್ವಾದ ಪಡೆದರು.

17 ರ ವಯೋಮಾನದ ವಿಭಾಗದಲ್ಲಿ ಕಲ್ಮಂಜ ಪ್ರೌಢ ಶಾಲೆಯ 5 ಬಾಲಕರು ಮತ್ತು ಇಬ್ಬರು ಬಾಲಕಿಯರು ವಿಜೇತರಾಗಿ ಆ.31 ರಂದು ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇವರಿಗೆ ಸಂಸ್ಥೆಯ ಆಂಗ್ಲ ಭಾಷಾ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಪಿ ರವರು ತರಬೇತಿಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಬಂಟರ ಸಂಘದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಎ.ಸದಾನಂದ ಶೆಟ್ಟಿ ರವರಿಗೆ ಗೌರವಾರ್ಪಣೆ

Suddi Udaya

ಚಾರ್ಮಾಡಿಯಲ್ಲಿ ಟೊಮ್ಯಾಟೊ ಟೆಂಪೋ ಪಲ್ಟಿ

Suddi Udaya

ಪಶುಸಂಗೋಪನೆ ಇಲಾಖೆಯ ನಿವೃತ್ತ ನೌಕರನಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು

Suddi Udaya

ನಾವೂರು ಗ್ರಾಮ ಪಂಚಾಯತ್‌ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಧರ್ಮಸ್ಥಳ : ಹಾವು ಕಡಿದು ಮಹಿಳೆ ಸಾವು

Suddi Udaya

ಹೆಜಮಾಡಿಕೋಡಿಯಿಂದ ರೂ.21 ಲಕ್ಷ ಮೌಲ್ಯದ ಕಬ್ಬಿಣದ ಶೀಟು ಮತ್ತು ರಾಡ್‌ಗಳ ಕಳವು ಪ್ರಕರಣ: ಮದ್ದಡ್ಕ, ಬೆಳ್ತಂಗಡಿ, ಹಳೆಪೇಟೆ ಕುಂಠಿನಿಯ ಐವರು ಆರೋಪಿಗಳ ಬಂಧನ

Suddi Udaya
error: Content is protected !!