April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

ಬೆಳ್ತಂಗಡಿ: ಕೊಯ್ಯೂರಿನಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಶಾಲೆಯ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದ ಅಭಿನಯ ಗೀತೆಯಲ್ಲಿ ಸಂಜನಾ ಎಸ್ ಮೊದಲ ಸ್ಥಾನ, ಕಿರಿಯ ಪ್ರಾಥಮಿಕ ವಿಭಾಗದ ಅಭಿನಯ ಗೀತೆಯಲ್ಲಿ ಅನಘಾ ಮೊದಲ ಸ್ಥಾನ, ಹಿರಿಯ ಪ್ರಾಥಮಿಕ ವಿಭಾಗದ ಕನ್ನಡ ಕಂಠಪಾಠದಲ್ಲಿ ಸಂಜನಾ ಎಸ್ ಮೊದಲ ಸ್ಥಾನ, ಹಿರಿಯ ಪ್ರಾಥಮಿಕ ವಿಭಾಗದ ಇಂಗ್ಲೀಷ್ ಕಂಠಪಾಠದಲ್ಲಿ ರಿತಿಕ ಶಣೈ ಮೂರನೇ ಸ್ಥಾನ, ಚಿತ್ರಕಲೆ ಹಿರಿಯ ಪ್ರಾಥಮಿಕದಲ್ಲಿ ಬೃಂದಾ ಮೊದಲ ಸ್ಥಾನ, ಕ್ಲೇ ಮೂಡಲಿಂಗ್ ಹಿರಿಯ ಪ್ರಾಥಮಿಕ ದಿಶಾ ಮೂರನೇ ಸ್ಥಾನ, ಭಕ್ತಿ ಗೀತೆ ಕಿರಿಯ ಪ್ರಾಥಮಿಕ ಜನೇಶ್ ದ್ವಿತೀಯ ಸ್ಥಾನ, ಲಘು ಸಂಗೀತ ಹಿರಿಯ ಪ್ರಾಥಮಿಕ ಶ್ರೀರಕ್ಷ ಎಂ ಭಟ್ ಮೂರನೇ ಸ್ಥಾನ, ಕಥೆ ಹೇಳುವುದು ಹಿರಿಯ ಪ್ರಾಥಮಿಕ ವಿಭಾಗ ನಿಧಿಶ ಮೊದಲ ಸ್ಥಾನ, ಭಕ್ತಿ ಗೀತೆ ಹಿರಿಯ ಪ್ರಾಥಮಿಕ ವಿಭಾಗ ಪ್ರಾಪ್ತಿವೀ ಶೆಟ್ಟಿ ಮೊದಲ ಸ್ಥಾನ, ಕ್ಲೇ ಮೋಡೆಲಿಂಗ್ ಹಿರಿಯ ಪ್ರಾಥಮಿಕ ವಿಭಾಗ ದೀಪ್ತಾ ದ್ವಿತೀಯ ಸ್ಥಾನ, ಲಘು ಸಂಗೀತ ಕಿರಿಯ ಪ್ರಾಥಮಿಕ ಅಂಜಲಿ ಮೊದಲ ಸ್ಥಾನ, ಕಥೆ ಹೇಳುವುದು ಕಿರಿಯ ಪ್ರಾಥಮಿಕ ದಿಶಾ ಮೊದಲ ಸ್ಥಾನ, ಧಾರ್ಮಿಕ ಪಠಣ ಕಿರಿಯ ಪ್ರಾಥಮಿಕ ಶ್ರೀರಾಮ ಎಂ ಭಟ್ ಮೂರನೇ ಸ್ಥಾನ, ಧಾರ್ಮಿಕ ಪಠಣ ಹಿರಿಯ ಪ್ರಾಥಮಿಕ ಶ್ರೀರಕ್ಷ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಶಾಲಾ ಶಿಕ್ಷಕ ವೃಂದ ಹಾಗೂ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ರವರ ಸಹಕಾರದಿಂದ ಮಕ್ಕಳ ಪ್ರತಿಭೆಗೆ ಬಹುಮಾನ ಬಂದಿರುತ್ತದೆ.

Related posts

ಧರ್ಮಸ್ಥಳದ ನೆರವಿನಿಂದ ರುದ್ರಭೂಮಿಗಳಿಗೆ ಕಾಯಕಲ್ಪ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ಕ್ಷೇಮ ನಿಧಿಯ 15ನೇ ಸಹಾಯಧನ ವಿತರಣೆ

Suddi Udaya

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಕಾರ್ಯತಂತ್ರ ಯೋಜನೆ ತರಬೇತಿ ಕಾರ್ಯಾಗಾರ

Suddi Udaya

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ರೂ. 20 ಸಾವಿರ ಹಸ್ತಾಂತರ

Suddi Udaya

ಸ್ಪಂದನಾ ಸೇವಾ ಸಂಘದ ಯೋಜನೆಯಿಂದ ಚಿಕಿತ್ಸಾ ನೆರವು

Suddi Udaya
error: Content is protected !!