ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಹಾಗೂ ಜೆ ಸಿ ಐ ಮಂಜುಶ್ರೀ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ಕಬ್ಸ್ ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ದೇಶಭಕ್ತಿ , ರೋವರ್ಸ್ ರೇಂಜರ್ಸ್ ಗಳ ಜನಪದ ಗೀತೆಗಳ ಗೀತ ಗಾಯನ ಸ್ಪರ್ಧೆಯು ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನಡೆಯಿತು.
ಗೀತಾ ಗಾಯನ ಕಾರ್ಯಕ್ರಮವನ್ನು ಜೆಸಿಐ ಮಂಜುಶ್ರೀ ಬೆಳ್ತಂಗಡಿಯ ಅಧ್ಯಕ್ಷ ಶಂಕರ್ ರಾವ್ ದೀಪ ಬೆಳಗಿಸಿ , ಉದ್ಘಾಟಿಸಿ ಮಾತನಾಡಿದರು . ಜೆಸಿಐ ಮಂಜುಶ್ರೀ ಬೆಳ್ತಂಗಡಿಯ 15ರ ವಲಯಧಿಕಾರಿ ಸ್ವರೂಪ್ ಶೇಖರ ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಧ್ಯಕ್ಷರಾದ ಪದ್ಮ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ, ಜೊತೆ ಕಾರ್ಯದರ್ಶಿ ಬ್ಲೆಂಡಿನ್ ರೋಡ್ರಿಗಸ್ , ಗೌರವ ಉಪಸ್ಥಿತಿಯಲ್ಲಿ ಹೋಲಿ ರೆಡಿಮರ್ ಶಾಲೆಯ ಮುಖ್ಯೋಪಾಧ್ಯಾಯರಾದ ಧರ್ಮಗುರುಗಳಾದ ಪೂಜ್ಯ ಸ್ಲಿಪ್ಪರ್ ಕ್ಲಿಪಡ್೯ ಪಿಂಟೋ ಮಕ್ಕಳನ್ನು ಆಶೀರ್ವದಿಸಿ ಶುಭ ಹಾರೈಸಿದರು.
ತೀರ್ಪುಗಾರರಾಗಿ ಜೆಸಿಐ ಮಂಜುಶ್ರೀ ಬೆಳ್ತಂಗಡಿಯ ಚಂದ್ರಹಾಸ ಬಳ್ಳಂಜ, ಶ್ರೀದೇವಿ ಕೆ.ಧರ್ಮಸ್ಧಳ, ಶಾಲಿನಿ ಜಿ.ಎಸ್ ಗೇರುಕಟ್ಟೆ ಸಹಕರಿಸಿದರು.
ಕಬ್ ವಿಭಾಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಮೊದಲ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಎಸ್‌ಡಿಎಂ ಸಿಬಿಎಸ್ಇ ಉಜಿರೆ ದ್ವಿತೀಯ ಸ್ಥಾನ, ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ತೃತಿಯ ಪಡೆದುಕೊಂಡಿರುತ್ತದೆ.
ಬುಲ್ ಬುಲ್ ವಿಭಾಗದಲ್ಲಿ ಎಸ್ ಡಿ ಎಂ ಸಿಬಿಎಸ್ಇ ಮೊದಲ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ, ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ, ಎಸ್ ಡಿಎಮ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ತೃತೀಯ ಸ್ಥಾನ ಸ್ಥಾನ ಪಡೆದಿರುತ್ತದೆ.
ಸ್ಕೌಟ್ ವಿಭಾಗದಲ್ಲಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ ಮೊದಲ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಸಂತ ತೆರೇಸಾ ಶಾಲೆ ಬೆಳ್ತಂಗಡಿ ದ್ವಿತೀಯ ಸ್ಥಾನ, ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ತೃತೀಯ ಸ್ಥಾನ ಪಡೆದುಕೊಂಡಿರುತ್ತದೆ.
ಗೈಡ್ ವಿಭಾಗದಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಮೊದಲ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತದೆ.
ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ ದ್ವಿತೀಯ ಸ್ಥಾನ, ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಇ ಉಜಿರೆ ತೃತೀಯ ಸ್ಥಾನ ಪಡೆದುಕೊಂಡಿದೆ.
ರೋವರ್ ವಿಭಾಗದಲ್ಲಿ ವಾಣಿ ಪದವಿಪೂರ್ವ ಕಾಲೇಜ್ ನ ರೋವಸ್ ಗಳು ಮೊದಲ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ರೇಂಜರ್ ವಿಭಾಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ನಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಾಣಿ ಪದವಿ ಪೂರ್ವ ಕಾಲೇಜು ಹಳೆಕೋಟೆ ಬೆಳ್ತಂಗಡಿ ರೇಂಜರ್ಸ್ ದ್ವಿತೀಯ ಸ್ಥಾನ, ಮುಂಡಾಚೆ ಪದವಿಪೂರ್ವ ಕಾಲೇಜು ಮುಂಡಾಜೆ ಇಲ್ಲಿಯ ರೇಂಜರ್ಸ್ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಸುಮಾರು 10 ಶಾಲೆಗಳ200 ಕಬ್ಸ್ ಬುಲ್ ಬುಲ್ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಹಾಗೂ ರಂಜಸ್ ಭಾಗವಹಿಸಿರುತ್ತಾರೆ,
ನಡ ಪದವಿ ಪೂರ್ವ ಕಾಲೇಜ್ ನ ರೇಂಜರ್ಸ್, ಮುಂಡಾಜೆ ಪದವಿ ಪೂರ್ವ ಕಾಲೇಜಿನ ರೇಂಜರ್ಸ್, ವಾಣಿ ಪದವಿ ಪೂರ್ವ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯಲ್ಲಿ ಸ್ಕೌಟ್ ಮಾಸ್ಟರ್ ವಿನ್ಸೆಂಟ್ ಸಿಕ್ವೇರ ರವರ ಸಹಕರಿಸಿದರೆ, ಸ್ವಾಗತವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಅಧ್ಯಕ್ಷರಾದ ಪದ್ಮ ಕುಮಾರ್ , ಧನ್ಯವಾದವನ್ನು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ನೇರವೇರಿಸಿ ಕೊಟ್ಟು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಹಾಗೂ ಎಲ್ಲಾ ಶಾಲೆಯ ಸ್ಕೌಟ್ಸ್ ರೋವರ್ ಲೀಡರ್ ರೇಂಜರ್ ಲೀಡರ್, ಸ್ಕೌಟ್ ಮಾಸ್ಟರ್ ಗೈಡ್ ಕ್ಯಾಪ್ಟನ್ಸ್, ಫ್ಲಾಕ್ ಲೀಡರ್ಸ್ ಕಬ್ ಮಾಸ್ಟರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.