ಬೆಳ್ತಂಗಡಿ: ಧಮ೯ಸ್ಥಳ ಗ್ರಾಮದ ಪಾಂಗಾಳ ಕು. ಸೌಜನ್ಯಳ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಆ.21ರಂದುಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.
ಸೌಜನ್ಯ ಮೃತದೇಹ ದೊರೆತ ಸ್ಥಳಕ್ಕೆ ಹೋಗಿ , ಪೊಲೀಸರಿಂದ ಮಾಹಿತಿಗಳನ್ನು ಪಡೆದುಕೊಂಡರು. ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮಾವ ವಿಠಲ ಗೌಡ ಅವರಿಂದ ಮಾಹಿತಿಗಳನ್ನು ಪಡೆದು ಕೊಂಡರು. ಈ ಪ್ರಕರಣದಲ್ಲಿ ಆಯೋಗ ಯಾವ ರೀತಿಯಾಗಿ ಕೆಲಸ ಮಾಡಬಹುದು ಎಂಬ ವಿಚಾರವನ್ನು ಪರಿಶೀಲಿಸುತ್ತೇವೆ, ಕಾನೂನು ಪ್ರಕಾರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆಯೋಗ ಸಿದ್ದವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸೌಜನ್ಯಳ ಸಹೋದರರ ಶಿಕ್ಷಣ ಮುಗಿದಿದ್ದು ಮನೆಯಲ್ಲಿ ಯಾರಿಗಾದರೂ ಸರಕಾರಿ ಉದ್ಯೋಗ ನೀಡಲು ಸಾದ್ಯವಿದೆಯೇ ಎಂಬುದನ್ನು ಪರಿಶೀಲಿಸುವುದಾಗಿಯೂ ಅವರು ತಿಳಿಸಿದರು.
ಈ ಪರಿಸರಕ್ಕೆ ಬಸ್ಸಿನ ವ್ಯವಸ್ಥೆ ಮಾಡಬೇಕು ಹಾಗೂ ಇಲ್ಲೊಂದು ಅಂಗನವಾಡಿ ಕೇಂದ್ರವಿರಬೇಕು ಎಂಬ ಬಗೆಗೆ ಬಹುದಿನಗಳಿಂದ ಬೇಡಿಕೆಯಿರುವುದಾಗಿ ಸೌಜನ್ಯಳ ಮನೆಯವರು ತಿಳಿಸಿದಾಗ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಿಡಿಪಿಒ ಪ್ರಿಯಾ ಆಗ್ನೆಸ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು