April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಶುಭ ಹಾರೈಸಿದ ಡಾ. ಡಿ ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಚಂದ್ರ‍ಯಾನದ ಸರಣಿಯ ಮೂರನೇ ಯಾನದ ವಿಕ್ರಮ್ ಚಂದ್ರನ ಅಂಗಳಕ್ಕೆ ಇಂದು ಬುಧವಾರ ಕಾಲಿಡುವ ಅಂತಿಮ ರೋಚಕ ಕ್ಷಣಗಳನ್ನು ನಾನು ಕೂಡಾ ಅತ್ಯಂತ ಕುತೂಹಲ ಮತ್ತು ಆಸಕ್ತಿಯಿಂದ ವೀಕ್ಷಿಸಿ ಸಂತಸ ಹಾಗೂ ಅಚ್ಚರಿ ಪಟ್ಟಿದ್ದೇನೆ. ಈ ಅದ್ಭುತ ಯಶಸ್ಸಿಗೆ ಭಗೀರಥ ಪ್ರಯತ್ನ ಮಾಡಿದ ಬಾಹ್ಯಾಕಾಶ ವಿಜ್ಞಾನಿಗಳೆಲ್ಲರನ್ನೂ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಇದೊಂದು ವಿಶ್ವದಾಖಲೆಯಾಗಿದ್ದು ಭಾರತದ ಕೀರ್ತಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹೆಚ್ಚಾಗಿದೆ.

ಚಂದ್ರನನ್ನು ಈ ಸಂಭ್ರಮ – ಸಡಗರದ ಸಂದರ್ಭದಲ್ಲಿ ಸ್ಮರಿಸಿ ದೂರದಿಂದಲೇ ಪರಿಚಯವಾದ ಚಂದ್ರನನ್ನು ಅತೀ ಸಮೀಪಕ್ಕೆ ತಂದ ಎಲ್ಲಾ ಬಾಹ್ಯಾಕಾಶ ವಿಜ್ಞಾನಿಗಳನ್ನು ಮತ್ತು ತಂತ್ರಜ್ಞರನ್ನು ನಮ್ಮ ದೇಶದ ಎಲ್ಲಾ ಪ್ರಜೆಗಳ ಪರವಾಗಿ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

ಎಲ್ಲರಿಗೂ ಉಜ್ವಲ ಭವಿಷ್ಯವನ್ನು ಹಾರೈಸುತ್ತಾ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂದೆ ಇನ್ನೂ ಹೆಚ್ಚಿನ ಸೇವೆ – ಸಾಧನೆ ಮಾಡಿ ಯಶಸ್ಸನ್ನು ಪಡೆಯುವಂತೆ ಶ್ರೀ ಮಂಜುನಾಥ ಸ್ವಾಮಿ ಹಾಗೂ ಧರ್ಮದೇವತೆಗಳು ಅನುಗ್ರಹಿಸಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

Related posts

ಕಳಿಯ ಗ್ರಾ.ಪಂ. ನಿಂದ ಪ.ಜಾತಿ ಮತ್ತು ಪ.ಪಂ ಕುಟುಂಬದವರಿಗೆ ಫ್ಯಾನ್ ವಿತರಣೆ

Suddi Udaya

ಅರಸಿನಮಕ್ಕಿ: ಅರಿಕೇಗುಡ್ಡೆ ಶ್ರೀ ವನದುರ್ಗ ಕ್ಷೇತ್ರದಲ್ಲಿ ವಿಷ್ಣು ಸಹಸ್ರನಾಮ ಪಠಣ ಪ್ರಾರಂಭ

Suddi Udaya

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನಗೈದು ಮಾದರಿಯಾದ ಸುಪ್ರಾಶ್ವರಾಜ್ ಜೈನ್ ಶಿರ್ಲಾಲು

Suddi Udaya

ದ.ಕ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ಕೊರಗಪ್ಪ ನಾಯ್ಕ ಮುಂಡಾಜೆ ನೇಮಕ

Suddi Udaya

ತುರ್ತುಕರೆಗೆ ಸ್ಪಂದಿಸಿದ ಉಜಿರೆ ಬೆಳಾಲು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

Suddi Udaya

ಮಡಂತ್ಯಾರು ಮಂಜಲ್ ಪಲ್ಕೆಯಲ್ಲಿ ತೆರೆದ ಕೊಳವೆ ಬಾವಿಯನ್ನು ಮುಚ್ಚಿಸಿದ ಮಡಂತ್ಯಾರು ಗ್ರಾ.ಪಂ.

Suddi Udaya
error: Content is protected !!