ಬೆಳ್ತಂಗಡಿ: ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಸೌಮ್ಯಲತಾ ನವೀನ್ ಅವರು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಾ. ಮಂಜುನಾಥ್ ಕೌಂಟೆ ಮಾರ್ಗದರ್ಶನದಲ್ಲಿ ಮಂಡಿಸಿದ “ಡಿಸೈನ್ ಎಂಡ್ ಡೆವೆಲಪ್‌ಮೆಂಟ್ ಆಫ್ ಲೊ ಲೆಟೆನ್ಸಿ, ಎನರ್ಜಿ ಎಫಿಸಿಯೆಂಟ್ ಇಂಟಲಿಜೆಂಟ್ ಮಾಡೆಲ್ ಫಾರ್ ರಿಸೋರ್ಸ್ ಕನ್‌ಸ್ಟ್ರೈಂಟ್ ಇಂಟರ್‌ನೆಟ್ ಆಫ್ ಥಿಂಗ್ಸ್ ಎಡ್ಜ್” ಎಂಬ ಪ್ರಬಂಧಕ್ಕೆ ರೇವಾ ವಿ.ವಿ.ಯು ಪಿ.ಎಚ್.ಡಿ.ಪದವಿಯನ್ನು ಪ್ರದಾನಿಸಿದೆ.
ಇವರು ಬೆಳ್ತಂಗಡಿ ತಾಲೂಕಿನ ಅಳದಂಗಡಿ ಹೊಸಪಟ್ಣ ಹೆಚ್. ಎಲ್. ರಾವ್, ಕುಸುಮ ದಂಪತಿಯ ಪುತ್ರಿ.
ಬೆಂಗಳೂರಿನಲ್ಲಿರುವ ನವೀನ್ ಅವರ ಪತ್ನಿ ಮತ್ತು ಉಪ್ಪುಂದ ಮನೋಹರ ರಾವ್ , ಗಾಯತ್ರಿ ದಂಪತಿಯ ಸೊಸೆಯಾಗಿದ್ದಾರೆ.