28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ರಿಲಾಯನ್ಸ್ ಪೈನಾನ್ಸ್ ನಿಂದ 5% ಬಡ್ಡಿ ದರದಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಬ್ಯಾಂಕ್ ಖಾತೆಯಿಂದ ರೂ.8.40 ಲಕ್ಷ ಪಡೆದು ವಂಚನೆ

ಬೆಳ್ತಂಗಡಿ : ರಿಲಾಯನ್ಸ್ ಪೈನಾನ್ಸ್ ನಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೋವ೯ 5% ಬಡ್ಡಿ ದರದಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಬ್ಯಾಂಕ್ ಹಾಗೂ ಇತರ ದಾಖಲೆಗಳನ್ನು ಪಡೆದು, ಬ್ಯಾಂಕ್ ಖಾತೆಯಿಂದ ರೂ. 8.40 ಲಕ್ಷ ಡ್ರಾ ಮಾಡಿ ವಂಚಿಸಿದ ಪ್ರಕರಣ ಪಡಂಗಡಿಯಲ್ಲಿ ನಡೆದಿದೆ.

ಪಡಂಗಡಿ ಗ್ರಾಮದ ನಿವಾಸಿ ನೀನಾ ರೋಡ್ರೀಗಸ್ ಎಂಬವರು ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಘಟನೆ ಹಿನ್ನೆಲೆ : ‌ಆ. 1ರಂದು ಅಪರಿಚಿತ ನಂಬರ್ ನಿಂದ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಕರೆ ಮಾಡಿ ನಾವು ರಿಲಾಯನ್ಸ್ ಪೈನಾನ್ಸ್ ನಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡು 5% ಬಡ್ಡಿ ದರದಲ್ಲಿ ಲೋನ್ ಕೊಡುವುದಾಗಿಯೂ, ಲೋನ್ ಬೇಕಾದಲ್ಲಿ ಬ್ಯಾಂಕ್ ಹಾಗೂ ಇತರ ದಾಖಲಾತಿಗಳನ್ನು ನೀಡುವಂತೆ ತಿಳಿಸಿದಾಗ, ನೀನಾ ರೋಡ್ರೀಗಸ್ ಎಂಬವರು ಇದು ಸತ್ಯವಾಗಿರಬಹುದೆಂದು ನಂಬಿ ಒಪ್ಪಿಕೊಂಡು ಕರೆ ಬಂದ ನಂಬರ್ ಗೆ ಬ್ಯಾಂಕ್ ದಾಖಲೆ ಸೇರಿದಂತೆ ಇತರೆ ದಾಖಲೆಗಳನ್ನು ಕಳಿಸಿಕೊಟ್ಟಿರುದ್ದರು. ಬಳಿಕ ಅಪರಿಚಿತ ವ್ಯಕ್ತಿಯು ಲೋನ್ ಸಲುವಾಗಿ ಆ. 1 ರಿಂದ ಆ.17 ರವರೆಗೆ ಲೀನಾ ರೊಡ್ರಿಗಸ್ ಅವರ ಖಾತೆಗಳಿಂದ ಒಟ್ಟು 8,40,275/- ರೂ ಹಣವನ್ನು ಬೇರೆ ಬೇರೆ ಖಾತೆಗಳಿಗೆ ಆನ್ ಲೈನ್ ಮುಖಾಂತರ ಹಾಕಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.
ಅಪರಿಚಿತನಿಂದ ವಂಚನೆಗೆ ಒಳಗಾದ ಲೀನಾ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 77/2023 ಕಲಂ; 419 ,420 IPC 66(D) IT ACT ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕಲ್ಲೇರಿ ಐಸಿರಿ ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ ಮತ್ತು ಶ್ರಮದಾನ

Suddi Udaya

ಹಾಸನ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿ ಶಿವಪ್ರಸಾದ್ ಅಜಿಲರಿಗೆ ಹೆಚ್ಚುವರಿ ಜವಾಬ್ದಾರಿ: ಇಂದು ಅಧಿಕಾರ ಸ್ವೀಕಾರ

Suddi Udaya

“ಪುಣ್ಯ ಕೋಟಿಗೆ ಒಂದು ಕೋಟಿ” ವಿಶೇಷ ಪರಿಕಲ್ಪನೆಯಲ್ಲಿ ನಡೆಯಲಿದೆ ನಂದಗೋಕುಲ ದೀಪೋತ್ಸವ

Suddi Udaya

ಅಳದಂಗಡಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ನಾರಾವಿ ವಾಲ್ಮೀಕಿ ಆಶ್ರಮ ಶಾಲಾ ಪ್ರಾರಂಭೋತ್ಸವ

Suddi Udaya

ಉಜಿರೆ: ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!