September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೂಳಬೆಟ್ಟು ಬರಾಯ ಶ್ರೀಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಪೂರ್ವಭಾವಿ ಪ್ರಾರ್ಥನೆ

ಬೆಳ್ತಂಗಡಿ: ಸೂಳಬೆಟ್ಟು ಬರಾಯ ಶ್ರೀಗೋಪಾಲಕೃಷ್ಣ ದೇವರಿಗೆ 2024ರಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ಸಂಕಲ್ಪಿಸಲಾಗಿದ್ದು ಅದರ ಯಶಸ್ಸಿಗಾಗಿ ಪೂರ್ವಭಾವಿಯಾಗಿ ಆ.23 ರಂದು ಪ್ರಾರ್ಥನೆ ಸಲ್ಲಿಸಲಾಯಿತು.
ಅಳದಂಗಡಿ ಅರಮನೆ ಡಾ ಪದ್ಮಪ್ರಸಾದ ಅಜಿಲ ಅವರು ಬ್ರಹ್ಮಕಲಶೋತ್ಸವಕ್ಕೆ ಸಮ್ಮತಿ ಸೂಚಿಸಿ, ಶುಭ ಹಾರೈಸಿದರು.


ಬಳಿಕ ದೈವಜ್ಞರ ಮೂಲಕ ಆರೂಢ ಪ್ರಶ್ನೆ ನೆರವೇರಿಸುವುದು, ನಂತರ ದಿನಾಂಕ‌ ನಿಶ್ಚಯಿಸುವುದೆಂದು ನಿರ್ಧರಿಸಲಾಯಿತು.


ಈ ಸಂದರ್ಭ ತಂತ್ರಿಗಳಾದ ಸೀತಾರಾಮ ಕೇಳ್ಕರ್, ಸಂತೋಷ್ ಕೇಳ್ಕರ್, ದೇವಾಲಯದ ಮೊಕ್ತೇಸರ ಸದಾನಂದ ಸಹಸ್ರಬುದ್ದ್ಯೆ, ಸಹ ಮೊಕ್ತೇಸರರಾದ ಪ್ರಭಾಕರ ಆಠವಳೆ, ಪದ್ಮನಾಭ ನಾತು, ದಯಾನಂದ ನಾತು, ಗಜಾನನ ನಾತು, ಪುರುಷೋತ್ತಮ ತಾಮ್ಹನ್‌ಕಾರ್, ಅರ್ಚಕ ಭಾರ್ಗವ ಮರಾಠೆ, ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದ ಅಧ್ಯಕ್ಷ ತ್ರಿವಿಕ್ರಮ ಕೇಳ್ಕರ್ ಹಾಗೂ ಸೂಳಬೆಟ್ಟು, ಕುದ್ಯಾಡಿ, ಸುಲ್ಕೇರಿ, ಸವಣಾಲು, ಕಾಜಿಮುಗೇರು, ಫಂಡಿಜೆ ವಾಳ್ಯದ ಭಜಕರು ಉಪಸ್ಥಿತರಿದ್ದರು.

Related posts

ಕಕ್ಕಿಂಜೆ ಶಾಲಾ ಪ್ರಾರಂಭೋತ್ಸವ : ಪೋಷಕರಿಗೆ ಮಾರ್ಗದರ್ಶನ

Suddi Udaya

ಜೂ.22: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ

Suddi Udaya

ಪರೀಕ ಸೌಖ್ಯವನ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು ವಾರ್ಷಿಕೋತ್ಸವ ಸಮಾರಂಭ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಪಾಲನಾ ಸಮಿತಿಯಿಂದ ನೂತನವಾಗಿ ಆಯ್ಕೆಗೊಂಡ ಧರ್ಮಾಧ್ಯಕ್ಷರಿಗೆ ಸ್ವಾಗತ

Suddi Udaya

ಕಾಯರ್ತಡ್ಕದಲ್ಲಿ ಮಾರಾಕಾಯುಧದಿಂದ ಹಲ್ಲೆ; ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

Suddi Udaya
error: Content is protected !!