ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಿರಂಜೀವಿ ಶೆಟ್ಟಿ ನಾಳ ನಿರ್ಮಾಣದ ‘ಮೃತ್ಯುಂಜಯ’ ಮೈರಲ್ಕೆ ಶ್ರೀ ಕಿರಾತಮೂರ್ತಿ ದೇವಸ್ಥಾನದ ಭಕ್ತಿ ಗೀತೆ ಬಿಡುಗಡೆ

ಓಡಿಲ್ನಾಳ: ವರಮಹಾಲಕ್ಷ್ಮೀ ಪೂಜೆಯ ಶುಭ ಸಂದರ್ಭದಲ್ಲಿ ಮೃತ್ಯುಂಜಯ ಎನ್ನುವ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತಿ ಗೀತೆಯನ್ನು ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೈರಲ್ಕೆ ಶ್ರೀ ಕಿರಾತಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗೋಪಾಲ ಶೆಟ್ಟಿಯವರು ಮೃತ್ಯುಂಜಯ ಗೀತೆಯನ್ನು ನಿರ್ಮಾಣ ಮಾಡಿರುವ ಚಿರಂಜೀವಿ ಶೆಟ್ಟಿ ನಾಳ ಇವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.


ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಪ್ರದಾನ ಅರ್ಚಕರಾದ ಪ್ರಸನ್ನ ಹೆಗಡೆ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಮತ್ತು ಕಾರ್ಯದರ್ಶಿ ವಿಮಲಾಕ್ಷ ಗೌಡ, ಯುವ ಸಮಿತಿಯ ಅಧ್ಯಕ್ಷರಾದ ನಿತೀಶ್ ಕೆ ಓಡಿಲ್ನಾಳ, ರಾಜ್ ಪ್ರಕಾಶ್ ಶೆಟ್ಟಿ ಸಾಹಿತ್ಯ ಬರೆದ ಸುಮನ್ ಏರ್ಮೆತೋಡಿ ಅಭಿನಯ ಮಾಡಿರುವ ಆಶ್ವಿತಾ, ನಿರೀಕ್ಷಾ ವಿ ಗೌಡ, ಗಾಯನ ಜಯಶ್ರೀ ಬೆಳ್ತಂಗಡಿ ಮತ್ತು ಅಶ್ವಿನಿ ರವಿ ಕುಲಾಲ್ , ಚಿತ್ರೀಕರಣ ಮಾಡಿದ ಅನೀಶ್ ನಾಯಕ್ ಮತ್ತು ತಂಡ ಹಾಗೂ ಆಡಳಿತ ಮಂಡಳಿಯ ಮತ್ತು ಯುವ ಸಮಿತಿಯ ಎಲ್ಲಾ ಸರ್ವ ಸದಸ್ಯರು , ಹಾಗೂ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಮಂಡಳಿಯ ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು ಮತ್ತು ಊರಿನ ಭಕ್ತ ಸಮೂಹ ಸಹಕರಿಸಿದರು.




Related posts

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಆಶಿತಾ ಜೈನ್ ರವರಿಗೆ ರಾಷ್ಟ್ರಮಟ್ಟದ ಸಿಇಇ ಯಲ್ಲಿ 8ನೇ ರ್ಯಾಂಕ್ ಹಾಗೂ ರಾಜ್ಯದಲ್ಲಿ 2 ರ್ಯಾಂಕ್

Suddi Udaya

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಬೆಳ್ತಂಗಡಿ ಎಸ್ ಡಿ ಎಂ ಶಾಲೆಯ ವಿದ್ಯಾರ್ಥಿ ದಿಯಾ ಆಳ್ವ ದ್ವಿತೀಯ

Suddi Udaya

ಮರೋಡಿ: ಏ.22ರಂದು ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ

Suddi Udaya

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಹತ್ವದ ಸಭೆ

Suddi Udaya

ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ವಿಶೇಷ ಸಭೆ

Suddi Udaya

ನಾಳ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾಲೋಚನೆ ಸಭೆ

Suddi Udaya
error: Content is protected !!