ಉಜಿರೆ: ಮಾಜಿ ಪ್ರಧಾನಮಂತ್ರಿಗಳಾದ ರಾಜೀವ್ ಗಾಂಧಿಯವರ ಜನ್ಮದಿನವನ್ನು ಅವರು ಮಾಡಿದ ಸದ್ಭಾವನೆಯ ಕಾರ್ಯಗಳನ್ನು ನೆನಪಿಸಿಕೊಳ್ಳುವುದಕ್ಕಾಗಿ ಎಸ್. ಡಿ. ಎಂ. (ಸ್ವಾಯತ್ತ) ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ವತಿಯಿಂದ ‘ಸದ್ಭಾವನಾ ದಿವಸ’ವನ್ನು ಆ.25 ರಂದು ಆಚರಿಸಲಾಯಿತು.
ಮುಖ್ಯಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕರದ ದಿವಾಕರ್ ಕೊಕ್ಕಡ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಕೃತಿಯ ನಿಯಮ ಮತ್ತು ಭಾರತದ ಜನಸಂಖ್ಯೆಯ ಬಗ್ಗೆ , ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳ ಬಗ್ಗೆ ಮಾತನಾಡಿದರು. ದೇಶ ಬೆಳವಣಿಗೆಯ ಪಥದಲ್ಲಿ ನಡೆಯಬೇಕಾದರೆ ಭಾರತೀಯರ ನಡವಳಿಕೆ ಹೇಗಿರಬೇಕೆಂದು ಎಳೆ ಎಳೆಯಾಗಿ ಮಾಹಿತಿ ನೀಡಿದರು. ಯಾವುದೇ ಜಾತಿ ಕನಿಷ್ಠವಲ್ಲ ಯಾವುದೇ ಜಾತಿ ಶ್ರೇಷ್ಠವಲ್ಲ, ವೃತ್ತಿಗನುಸಾರವಾಗಿ ಜಾತಿ ಎಂದು ಅರಿವು ಮೂಡಿಸಿದರು. ಕುವೆಂಪುರವರ ಉತ್ತಮ ಕವಿತೆಗಳನ್ನು ಜ್ಞಾಪಿಸಿಕೊಂಡರು. ನಮ್ಮಲ್ಲಿ ಕೆಟ್ಟ ಕೆಲಸಗಳು ನಾಶವಾಗಲಿ ಪರಿಸರವನ್ನು ಬೆಳೆಸುವ ಸೌಹಾರ್ದತೆ ಎಲ್ಲರಲ್ಲಿಯೂ ಬೆಳೆಯಲಿ ಎಂದು ಎಲ್ಲರಿಗೂ ಕರೆ ನೀಡಿದರು.
ಎಸ್ ಡಿ ಎಮ್ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ರೋವರ್ ಸ್ಕೌಟ್ ಲೀಡರ್ ಆಗಿರುವ ಪ್ರಸಾದ್ ಕುಮಾರ್ ಜೈನ್ ಮತ್ತು ರೇಂಜರ್ಸ್ ಲೀಡರ್ ಗಾನವಿ .ಡಿ.ಜೈನ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಯೋಜಕ ಶಶಾಂಕ್ ಬಿಜೆ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕಿ ಪುಣ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ರೋವರ್ಸ್ ಸ್ಕೌಟ್ಸ್ ಲೀಡರ್ ಪ್ರಸಾದ್ ಕುಮಾರ್ ಜೈನ್ ವಂದಿಸಿದರು.