September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನ.13: ದೀಪಾವಳಿ ಹಬ್ಬದ ಪ್ರಯುಕ್ತ ಕುಸಲ್ದ ಜವನೆರ್ ಬದ್ಯಾರು – ಶಿರ್ಲಾಲು ಇದರ ವತಿಯಿಂದ 5ನೇ ವರ್ಷದ ‘ಕೆಸರ್ ಡೊಂಜಿ ಕುಸಲ್ದ ಗೊಬ್ಬು’ ಕಾರ್ಯಕ್ರಮ

ಶಿರ್ಲಾಲು: ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಕುಸಲ್ದ ಜವನೆರ್ ಬದ್ಯಾರು – ಶಿರ್ಲಾಲು ಇದರ ವತಿಯಿಂದ 5ನೇ ವರ್ಷದ ‘ಕೆಸರ್ ಡೊಂಜಿ ಕುಸಲ್ದ ಗೊಬ್ಬು’ ಕಾರ್ಯಕ್ರಮವು ನ. 13 ರಂದು 10 ಗಂಟೆಗೆ “ನಲ್ಲಾರಗುತ್ತು ಬಾಕಿಮಾರ್” ಗದ್ದೆಯಲ್ಲಿ ನಡೆಯಲಿದೆ.


ಕಾರ್ಯಕ್ರಮದ ಉದ್ಘಾಟನೆಯನ್ನುಮೋನಪ್ಪ ಮೂಲ್ಯ ನಲ್ಲಾರಗುತ್ತು ರವರು ಮಾಡಲಿದ್ದಾರೆ. ಅಧ್ಯಕ್ಷರಾಗಿ ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು ಇದರ ಅಧ್ಯಕ್ಷರಾದ ಜಗನ್ನಾಥ್ ಕುಲಾಲ್ ಬೈರೊಟ್ಟು ವಹಿಸಲಿದ್ದಾರೆ.
ಕೆಸರು ಗದ್ದೆ ಕ್ರೀಡಾಕೂಟದ ಉದ್ಘಾಟನೆಯನ್ನು ತುಳುನಾಡು ಒಕ್ಕೂಟ ಬೆಳ್ತಂಗಡಿ ಸ್ಥಾಪಕ ಅಧ್ಯಕ್ಷರಾದ ಶೈಲೇಶ್ ಆರ್.ಜೆ ರವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ. ಕ್ಷೇ.ಧ.ಗ್ರಾ. ಯೋಜನೆ ಚಿತ್ರದುರ್ಗ ಇದರ ಯೋಜನಾಧಿಕಾರಿಗಳು ಪ್ರವೀಣ್ ಎ.ಜೆ, ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು ಇದರ ಕಾರ್ಯದರ್ಶಿ ಸದಾಶಿವ ಶಿವಗಿರಿ ಮತ್ತು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು ಇದರ ಮಾಜಿ ಅಧ್ಯಕ್ಷರಾದ ಸುರೇಶ್ ಮೂಲ್ಯ ಕೊಚ್ಚೊಟ್ಟು ವಹಿಸಲಿದ್ದಾರೆ.

ಕಾರ್ಯಕ್ರಮದ ವಿಶೇಷತೆ: ಕೆಸರು ಗದ್ದೆ ಕ್ರೀಡಾಕೂಟ, ಮಕ್ಕಳಿಗೆ ಗ್ರಾಮೀಣ ಕ್ರೀಡಾಕೂಟ , ಕಂಬಳದ ಕೋಣಗಳ ಓಟ ನಡೆಯಲಿದೆ.

Related posts

ಬ್ರಹ್ಮ ಕ್ಷೇತ್ರ ದೇವರ ಸನ್ನಿದಾನ ಮುಗುಳಿ ಬಸದಿಯಲ್ಲಿ ಸ್ವಚ್ಛತಾ ಶ್ರಮದಾನ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದ ಅಭಿವೃದ್ಧಿಗೆ ಧರ್ಮಸ್ಥಳದಿಂದ ರೂ.1 ಲಕ್ಷ ದೇಣಿಗೆ

Suddi Udaya

ಶಿಶಿಲ ಸ.ಉ.ಹಿ.ಪ್ರಾ. ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Suddi Udaya

ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ. ಜನಾರ್ದನ ಗೌಡ, ಉಪಾಧ್ಯಕ್ಷರಾಗಿ ಹೇಮಾವತಿ ಆಯ್ಕೆ

Suddi Udaya

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ರವರಿಗೆ ರಾಜ್ಯಮಟ್ಟದ “ರಾಷ್ಟ್ರಕವಿ ಕುವೆಂಪು ರತ್ನ” ಪ್ರಶಸ್ತಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya
error: Content is protected !!