24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಎಸ್ ಡಿ ಯಂ ಪಾಲಿಟೆಕ್ನಿಕ್ ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಉಜಿರೆ : ಎಸ್ ಡಿ ಯಂ ಪಾಲಿಟೆಕ್ನಿಕ್ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಇದರ ಆಶ್ರಯದಲ್ಲಿ ಮಂಗಳೂರಿನ ರೆಡ್ ಕ್ರಾಸ್ ರಕ್ತನಿಧಿ ಘಟಕದಿಂದ ಆ 26 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.


ಶಿಬಿರವನ್ನು ಉಜಿರೆಯ ಯಸ್ ಡಿ ಯಂ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಜನಾರ್ಧನ್ ಅವರು ಉದ್ಘಾಟಿಸಿ ಶುಭಹಾರೈಸಿದರು, ರೆಡ್ ಕ್ರಾಸ್ ರಕ್ತನಿಧಿಯ ಅಧಿಕಾರಿ ಪ್ರವೀಣ್ ಕುಮಾರ್ ರಕ್ತದಾನದ ಮಹತ್ವವನ್ನು ವಿವರಿಸಿದರು. ಸಮಾರಂಭದಲ್ಲಿ ಪ್ರಾಂಶುಪಾಲರಾದ ಸಂತೋಷ್, ಆಸ್ಪತ್ರೆಯ ಪ್ರಯೋಗಾಲಯ ಅಧಿಕಾರಿ ಶಿತಿಕಂಠ ಭಟ್, , ಎನ್ ಯಸ್ ಯಸ್ ಯೋಜನಾಧಿಕಾರಿ ಪ್ರಕಾಶ್ ಗೌಡ, ವೈ ಆರ್ ಸಿ ಕಾರ್ಯಕ್ರಮಾಧಿಕಾರಿ ಅವನೀಶ್ ಪಿ ಉಪಸ್ಥಿತರಿದ್ದರು. ಒಟ್ಟು 107 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Related posts

ಬೆಳ್ತಂಗಡಿ : ತ್ರಿ ಸ್ಟಾರ್ ವೈನ್ಸ್ ಶಾಪ್ ಕಳ್ಳತನ ಪ್ರಕರಣ: ಪ್ರಮುಖ ಆರೋಪಿ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ

Suddi Udaya

ಮೂಡುಕೋಡಿ ‘ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಮಾದರಿ ಕಾರ್ಯ

Suddi Udaya

ಪರ್ಸ್ ಹಿಂದಿರುಗಿಸಿ ಕೊಟ್ಟು ಮಾನವೀಯತೆ ಮೆರೆದ ಕೆಎಸ್.ಆರ್.ಟಿ.ಸಿ ಬಸ್ಸು ಸಿಬ್ಬಂದಿ

Suddi Udaya

ರಾಜ್ಯದ 5,8 ಮತ್ತು 9ನೇ ತರಗತಿ “ಬೋರ್ಡ್​” ಪರೀಕ್ಷೆಗೆ “ಸುಪ್ರೀಂ ಕೋರ್ಟ್” ತಡೆಯಾಜ್ಞೆ

Suddi Udaya

ಉಜಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ 110ನೇ ಸಂಸ್ಥಾಪನಾ ದಿನಾಚರಣೆ

Suddi Udaya

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಹೋಟೆಲ್ ಬೇಕರಿ ಗಳಿಗೆ ಕುಡಿಯುವ ನೀರು, ಶುಚಿತ್ವ ನಿಷೇದಿತ ಪ್ಲಾಸ್ಟಿಕ್ ಬಗ್ಗೆ ಪ.ಪಂ. ಮುಖ್ಯಾಧಿಕಾರಿಯಿಂದ ಪರಿಶೀಲನೆ

Suddi Udaya
error: Content is protected !!