September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಟೈಲರ್ ಅಸೋಸಿಯೇಷನ್ ನ ಸಮಿತಿಯ ಪದಾಧಿಕಾರಿಗಳು ಹಾಗೂ ಊರವರ ಸಹಕಾರದೊಂದಿಗೆ ಧನಸಹಾಯ ಹಸ್ತಾಂತರ

ವೇಣೂರು : ಇತ್ತೀಚೆಗೆ ಹೆರಿಗೆ ಸಂದರ್ಭದಲ್ಲಿ ನಿಧನರಾದ ವೇಣೂರು ವಲಯದ ಟೈಲರ್ ಅಸೋಸಿಯೇಷನ್ ನ ಸದಸ್ಯೆ ಶಿಲ್ಪಾ ಆಚಾರ್ಯ ಇವರ ಮಗಳ ವಿದ್ಯಾಭ್ಯಾಸಕ್ಕೆಂದು ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಊರವರ ಸಹಕಾರದೊಂದಿಗೆ ಸುಮಾರು ರೂ.50.ಸಾವಿರ ಒಟ್ಟು ಮಾಡಿದ್ದು ಇದರಲ್ಲಿ ಕುಂಭಶ್ರೀ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ಶಿಲ್ಪಾ ಅವರ ಮಗಳಾದ ರಾಜೇಶ್ವರಿಯ ಏಳನೇ ತರಗತಿಯ ಪ್ರಸ್ತುತ ವರ್ಷದ ವಿದ್ಯಾಭ್ಯಾಸದ ಶುಲ್ಕ 10,000 ರೂಪಾಯಿಯನ್ನು ,.ಕುಂಭಶ್ರೀ ಸಂಸ್ಥೆಯ ಸಂಚಾಲಕರಾದ ಗಿರೀಶ್. ಕೆ.ಎಚ್.ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಅಸ್ವಿತ್ ಕುಲಾಲ್, ಸಂಸ್ಥೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ಅಕ್ಷತಾ ಮತ್ತು ಶ್ರೀಮತಿ ಪವಿತ್ರ ಇವರ ಸಮ್ಮುಖದಲ್ಲಿ ನೀಡಲಾಯಿತು.

ಉಳಿದ 40,000 ಹಣವನ್ನು ವೇಣೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಒಂಬತ್ತು ವರ್ಷದ ಅವಧಿಗೆ ಶಿಲ್ಪಾಳ ಮಗಳು ರಾಜೇಶ್ವರಿಯ ಹೆಸರಿನಲ್ಲಿ ಫಿಕ್ಸಡ್ ಡಿಪಾಸಿಟ್ ಮಾಡಿ ಶಿಲ್ಪಾಳ ಮಗಳಾದ ರಾಜೇಶ್ವರಿಗೆ ಮತ್ತು ಪ್ರದೀಪ್ ಆಚಾರ್ಯ ರವರಿಗೆ ವಲಯದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.


ಈ ಸಂದರ್ಭ ದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ, ಜಿಲ್ಲಾ ಸಮಿತಿಯ ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ, ಹಾಗೂತಾಲುಕು ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಉಜಿರೆ, ತಾಲೂಕು ಸಮಿತಿಯ ಉಪಾಧ್ಯಕ್ಷರು ಪ್ರಮೀಳಾ ವೇಣೂರು , ವೇಣೂರು ವಲಯದ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಸುನೀತಾ , ಕೋಶಾಧಿಕಾರಿ ಸುಪ್ರೀತಾ, ಉಪಾಧ್ಯಕ್ಷರಾದ ಯೋಗೀಶ್, ಸುಚಿತ್ರಾ, ಹಾಗೂ ತಾಲೂಕು ಸಮಿತಿ ಸದಸ್ಯರು ರತ್ನಾಕರ ಹೆಗ್ಡೆ, ಆನಂದ್ ಕುಲಾಲ್, ಸಹನ ಶಾಸ್ತ್ರಿ, ಹಾಗೂ ಸಂಘಟನಾ ಕಾರ್ಯದರ್ಶಿಗಳು ಹರೀಶ್, ತುಳಸಿ ಉಪಸ್ಥಿತರಿದ್ದರು.

Related posts

ಬೆಳಾಲು ಶ್ರೀ ಧ. ಮಂ. ಪ್ರೌಢಶಾಲೆಯಲ್ಲಿ ಪೋಷಕರ ಸಮಾವೇಶ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಧನಸಹಾಯ

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಾಸಭೆ

Suddi Udaya

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕೋತ್ಸವ

Suddi Udaya

ಉಜಿರೆ : ಶ್ರೀ ಧ.ಮ. ಕಾಲೇಜು ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ – ವಿಶೇಷ ಸಾಧಕರಿಗೆ ಸನ್ಮಾನ – ಚಿಗುರು ಪತ್ರಿಕೆ ಅನಾವರಣ

Suddi Udaya
error: Content is protected !!