25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕೋತ್ಸವ

ಮಡಂತ್ಯಾರು: “ಜೀವನವನ್ನು ಭದ್ರವಾಗಿಸಿಕೊಳ್ಳಲು ದೊಡ್ಡ ದೊಡ್ಡ ಪದವಿಗಳು ಬೇಕಾಗಿಲ್ಲ, ಹಸಿವಿನ ಅರಿವು, ಆಸಕ್ತಿಯ ಕ್ಷೇತ್ರದಲ್ಲಿನ ಬದ್ಧತೆ ಮತ್ತು ಅಂತರಂಗದಲ್ಲಿರುವ ನಾಯಕತ್ವ ಗುಣವನ್ನು ಜಾಗೃತಗೊಳಿಸಿಕೊಳ್ಳುವ ಮನಸ್ಸು ಇದ್ದರೆ ಸಾಕು” ಎಂಬುದಾಗಿ ಲೆಕ್ಸಾ ಲೈಟಿಂಗ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯನಿರ್ವಾಹಕ ನಿರ್ದೇಶಕ ರೊನಾಲ್ಡ್ ಡಿ’ಸೋಜಾ ಅವರು ನುಡಿದರು.

ಇವರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ| ಡಾ| ಸ್ಕ್ಯಾನಿ ಗೋವಿಯಸ್ ಅವರು “ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುತ್ತವೆ. ಹಾಗಾಗಿ ಪಠ್ಯದ ಜೊತೆ ಜೊತೆಗೆ ಇತರ ಆಸಕ್ತಿಗಳಿಗೂ ಇಂಬು ಕೊಡಬೇಕು” ಎಂದರು

ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಲಿರುವ ಡಾ.ಈಶ್ವರಗೌಡ, ಮತ್ತು ಕಚೇರಿ ಸಿಬ್ಬಂದಿಗಳಾದ ಶ್ರೀಮತಿ ಅಪೋಲಿನ್ ಸೆರಾವೋ, ಪೆಡ್ಡಿ, ಮಾರ್ಸೆಲ್ ಬಿ ಎಸ್ ಡಿಸೋಜಾ ಇವರಿಗೆ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು.


ಕಳೆದ ಶೈಕ್ಷಣಿಕ ಅವಧಿಯಲ್ಲಿ ಎಂ ಕಾಂ ವಿಭಾಗದಲ್ಲಿ ಏಳನೇ ರಾಂಕ್ ಪಡೆದ ಭಾರ್ಗವಿ ಯು ಎಸ್ ಮತ್ತು ಉಪನ್ಯಾಸಕ ಸಾಧಕರಾದ ಲೆಫ್ಟಿನೆಂಟ್ ಆಲ್ವಿನ್ ಕೆ ಜಿ ಮತ್ತು ಪ್ರಶಾಂತ್ ಎಂ ಇವರನ್ನುಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಅಲೆಕ್ಸ್ ಐವನ್ ಸಿಕ್ವೇರಾ ಅವರು ನಿವೃತ್ತರಿಗೆ ಅಭಿನಂದನೆಯ ಮಾತುಗಳನ್ನಾಡಿದರು. ಅಭಿನಂದಿತರ ಪರವಾಗಿ ಡಾ. ಈಶ್ವರ ಗೌಡ ಅವರು ಸಂಸ್ಥೆಯಲ್ಲಿ ತಮಗೆ ಸಹರಿಸಿದವರೆಲ್ಲನ್ನು ನೆನಪಿಸಿಕೊಂಡರು.
ಐಕ್ಯೂಎಸಿ ಸಂಯೋಜಕ ರಾಬಿನ್ ಸೇರಾ ವರದಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ಪ್ರಕಾಶ್ ಕ್ರಮಧಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಲ್ಬರ್ಟ್ ಮೊರಾಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಲ್ಸನ್ ರೂಪೇಶ್ ಮೊರಾಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ನೆಲ್ಸನ್ ಲಸ್ರಾದೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ಪ್ರಕಾಶ್ ಡಿಸೋಜ ಧನ್ಯವಾದವಿತ್ತರು.
ಉಪನ್ಯಾಸಕ ನೆಲ್ಸನ್ ಮೋನಿಸ್ ಮತ್ತು ರಾಜೇಶ್ವರಿ ಎಂ ಕಾರ್ಯಕ್ರಮ ನಿರೂಪಿಸಿದರು.

Related posts

ಕಡಿರುದ್ಯಾವರ: ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು

Suddi Udaya

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಉಜಿರೆ ರುಡ್ ಸೆಟ್ ನಲ್ಲಿ ಸೆಲ್‌ಫೋನ್ ರಿಪೇರಿ ಮತ್ತು ದುರಸ್ತಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

Suddi Udaya

ಸೌತಡ್ಕ: ಕಡೀರದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ ಕೃಷಿ ಹಾನಿ

Suddi Udaya
error: Content is protected !!