September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೂಟ ಮಹಾಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಾಸಭೆ

ಉಜಿರೆ : ಬ್ರಾಹ್ಮಣರು ತಮ್ಮ ತಮ್ಮನವನ್ನು ಉಳಿಸಿಕೊಂಡು ಆಧುನಿಕ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮನ್ನು ತೆರೆದುಕೊಳ್ಳಬೇಕು. ಇಂದು ಆಧುನಿಕ ಸಮಾಜ ಒದಗಿಸುವ ಅವಕಾಶಗಳು ಸಾಕಷ್ಟಿವೆ, ಆದರೆ ಅವುಗಳನ್ನು ಸದುಪಯೋಗಿಸಿಕೊಳ್ಳುವ ಬರದಲ್ಲಿ ತಮ್ಮತನವನ್ನು ನಾವು ಕಳೆದುಕೊಳ್ಳಬಾರದು. ಸಾಧನೆ ಮಾಡಬೇಕು ಎಂಬ ಛಲದಿಂದ ಮುಂದುವರೆಯುವ ಬ್ರಾಹ್ಮಣ ಮಕ್ಕಳಿಗೆ ಪರಂಪರೆಯಿಂದ ಬಂದ ಬುದ್ಧಿವಂತಿಕೆ ವರವಾಗುತ್ತದೆ. ಆಧುನಿಕ ಕಾಲಕ್ಕೆ ಅನುಗುಣವಾಗಿ ಹೆಚ್ಚು ಆತ್ಮವಿಶ್ವಾಸದಿಂದ ಹೊಸ ಹೊಸ ತನ್ನ ಮಾಡುವಂತಹ ಹುಮ್ಮಸ್ಸು, ಸ್ಪೂರ್ತಿಯನ್ನು ಒದಗಿಸುವ ಕೆಲಸವನ್ನು ಹಿರಿಯರು ಮಾಡಬೇಕು ಎಂದು ಡಾಕ್ಟರ್ ರಾಘವೇಂದ್ರ ಹೊಳ್ಳ ಕರೆ ನೀಡಿದರು. ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಸ್ಥಾಪಕರಾದ ಡಾ. ರಾಘವೇಂದ್ರ ಹೊಳ್ಳ ಕೂಟ ಮಹಾಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಾಸಭೆಯ ಸಂದರ್ಭದಲ್ಲಿ ಹಮ್ಮಿಕೊಂಡ ದಿಕ್ಸೂಚಿ – ಶುಭ ಚಿಂತನೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯ ಜನಾರ್ಧನ ಸ್ವಾಮಿ ದೇವಸ್ಥಾನದ ಸೇವೆಯಲ್ಲಿ ಕೂಟ ಬಂಧುಗಳ ಕೊಡುಗೆಯನ್ನು ಸ್ಮರಿಸಿ ಅಂಗಸಂಸ್ಥೆಯ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.

ದಿಕ್ಸೂಚಿ ಶುಭ ಚಿಂತನೆ ಚಿಂತನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತಮ ಮಹಾ ಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ಅಧ್ಯಕ್ಷರಾದ ವಿಶ್ವನಾಥ್ ಹೊಳ್ಳ ಮಜ್ಜೇನಿಬೈಲು ವಹಿಸಿದ್ದರು. ಶ್ರೀ ರಮೇಶ್ ಮಯ್ಯ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮತ್ತು ಕಾರ್ಯದರ್ಶಿಗಳಾದ ವಿಷ್ಣು ಪ್ರಕಾಶ್ ವಂದಿಸಿದರು.

Related posts

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೋಷಕ ಮತ್ತು ಶಿಕ್ಷಕ ಸಭೆ

Suddi Udaya

ಬೆಳ್ತಂಗಡಿ : ಹಳೇಕೋಟೆ ಬಳಿ ಪಿಕಪ್ ಗೆ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು ; ಮತ್ತೋರ್ವ ಗಂಭೀರ

Suddi Udaya

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

Suddi Udaya

ತಣ್ಣೀರುಪಂತ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಟೈಲರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟನೆ

Suddi Udaya

ಕರುನಾಡು Got ಟ್ಯಾಲೆಂಟ್ ರಿಯಾಲಿಟಿ ಶೋ ಗೆ ಆಯ್ಕೆಯಾದ ಉಜಿರೆಯ ಹಿಪ್-ಬಾಯ್ಸ್ ನೃತ್ಯ ತಂಡ

Suddi Udaya

ಪಟ್ರಮೆ ಗ್ರಾ.ಪಂ. ಹಾಗೂ ಸಂಜೀವಿನಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಆಂದೋಲನ

Suddi Udaya
error: Content is protected !!