September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ಓಣಂ ಹಬ್ಬ ಆಚರಣೆ


ಗಂಡಿಬಾಗಿಲು: ಸಿಯೋನ್ ಆಶ್ರಮ ಗಂಡಿಬಾಗಿಲು ಇಲ್ಲಿ ಆ.29 ರಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ವ್ಯಕ್ತಿಗಳಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಗಂಡಿಬಾಗಿಲು ಚರ್ಚ್‌ನ ಧರ್ಮಗುರುಗಳಾದ ರೆ.ಫಾ.ಜೋಸೆಫ್ ಆಯಂಗುಡಿಯವರು ಆಶೀರ್ವದಿಸಿದರು. ಸಿಯೋನ್, ಆಶ್ರಮದ ಮ್ಯಾನೇಜಿಂಗ್ ಟ್ರಿಸ್ಪಿಯವರಾದ ಯು.ಸಿ.ಪೌಲೋಸ್‌ರವರು ಓಣಂ ಹಬ್ಬದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು.

ಹಬ್ಬಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರರವರು, ಮೇಲ್ವಿಚಾರಕರು ಹಾಗೂ ಸೇವಾನಿರತರು, ನೆರಿಯ ಗ್ರಾಮ ಪಂಚಾಯತ್‌ ಸದಸ್ಯರುಗಳು, ಊರಿನ ಹಾಗೂ ನೆರೆಕರೆಯ ಗ್ರಾಮಸ್ಥರು, ಶೌರ್ಯ ವಿಪತ್ತು ನಿರ್ವಹಣಾ ಘಟಕದವರು ಸೇರಿದಂತೆ ಇತರ ಸಂಘ ಸಂಸ್ಥೆಯವರು. ಸಿಯೋನ್ ಸಂಸ್ಥೆಯ ಎಲ್ಲಾ ಟ್ರಸ್ಟಿ ಸದಸ್ಯರುಗಳು, ಕುಟುಂಬಸ್ಥರು. ಸಿಬ್ಬಂದಿವರ್ಗದವರು, ಆಶ್ರಮನಿವಾಸಿಗಳು ಉಪಸ್ಥಿತರಿದ್ದರು.

ಸಿಯೋನ್‌ ಅಶ್ರಮದ ಸಿಬ್ಬಂದಿವರ್ಗದವರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಾಂತ್ವನಂ ಕುವೈಟ್ ಇವರ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Related posts

ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಕೊಕ್ಕಡ ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಧರ್ಮಸ್ಥಳ: ಬಸ್‌ ಕಿಟಕಿಯಿಂದ ಇಳಿಯಲು ಯತ್ನಿಸಿದ ವ್ಯಕ್ತಿ ಆಯತಪ್ಪಿ ರಸ್ತೆಗೆ ಬಿದ್ದು ಸಾವು

Suddi Udaya

ಧರ್ಮಸ್ಥಳದಲ್ಲಿ ಬಿವೋಕ್‌ ವಿದ್ಯಾರ್ಥಿಗಳಿಗೆ ಸ್ಟಾಪ್‌ ಮೋಶನ್‌ ಅನಿಮೇಶನ್‌ ಕಾರ್ಯಾಗಾರ

Suddi Udaya

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಮಡಂತ್ಯಾರ್ ರೋಟರಿ ಕ್ಲಬ್ ವತಿಯಿಂದ ಸಾಲುಮರ ಸಾರ್ವಜನಿಕ ಬಸ್ ನಿಲ್ದಾಣ ಉದ್ಘಾಟನೆ

Suddi Udaya
error: Content is protected !!