April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ ಗ್ರಾ.ಪಂ. ನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

ಕಳಿಯ: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯು ಮೈಸೂರಿನಲ್ಲಿ ಸಂಸದರಾದ ರಾಹುಲ್ ಗಾಂಧಿ, ಎ.ಐ.ಸಿ.ಸಿ.ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಎ.ಐ.ಸಿ.ಸಿ. ಪ್ರದಾನ ಕಾರ್ಯದರ್ಶಿಯಾದ ಸುರ್ಜೇ ವಾಲಾ ರವರ ಗಣ್ಯ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಆಹಾರ ಮತ್ತು ನಾಗರಿಕ ಪೂರೈಕ ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ಸರಕಾರದ ಹಲವಾರು ಸಚಿವರು, ಅಧಿಕಾರಿಗಳ ಸಮಕ್ಷಮದಲ್ಲಿ ಉದ್ಘಾಟನೆಗೊಂಡಿತು.


ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಕಳಿಯ ಗ್ರಾಮ ಪಂಚಾಯತ್ ನಲ್ಲಿ ಗ್ರಾಮಸ್ಥರು ವೀಕ್ಷಣೆ ಮಾಡಿದರು.
ಹಾಗೂ ಕಳಿಯ ಗ್ರಾಮ ಪಂಚಾಯತ್ ನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಕೂಡಾ ನೀಡಲಾಯಿತು.


ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ.ಎಮ್ ವಹಿಸಿದ್ದರು.
ಉಪಾದ್ಯಕ್ಷೆ ಶ್ರೀಮತಿ ಇಂದಿರಾ, ಅಭಿವೃದ್ಧಿ ಅಧಿಕಾರಿಯಾದ ಸಂತೋಷ್ ಪಾಟೀಲ್,ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಭಾಷಿಣಿ,ಶ್ರೀಮತಿ ಕುಸುಮ.ಎನ್ ಬಂಗೇರ,ಸುದಾಕರ ಮಜಲು,ಅಬ್ದುಲ್ ಕರೀಮ್, ಶ್ರೀಮತಿ ಮೋಹಿನಿ,ಲತೀಫ್ ಪರಿಮ,ಹರೀಶ್ ಕುಮಾರ್, ಶ್ರೀಮತಿ ಮರೀಟಾ ಪಿಂಟೋ, ಶ್ರೀಮತಿ ಪುಷ್ಪಾ,ಶ್ರೀಮತಿ ಶ್ವೇತಾ,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಹಾಜರಿದ್ದರು.ಪಂಚಾಯತ್ ಸಿಬ್ಬಂದಿಗಳಾದ ಸುಚಿತ್ರಾ, ಶಶಿಕಲಾ,ನಂದಿನಿ,ರವಿ ಎಚ್,ಸುರೇಶ್ ಗೌಡ ಸಹಕರಿಸಿದರು.

Related posts

ಉಜಿರೆ ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ ಯಶೋನಮನ ಕಾರ್ಯಕ್ರಮ ಉದ್ಘಾಟನೆ

Suddi Udaya

ಬೆಳ್ತಂಗಡಿ ಬಿಷಪ್ ರಿಗೆ ಲಯನ್ಸ್ ಕ್ಲಬ್ ನಿಂದ ಬೆಳ್ಳಿಹಬ್ಬ ವರ್ಷದ “ಗೌರವಾಭಿನಂದನೆ”

Suddi Udaya

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಕುಕ್ಕಳ – ಮಡಂತ್ಯಾರು ಗ್ರಾಮ ಸಮಿತಿ ರಚನೆ

Suddi Udaya

ಕೊಕ್ಕಡದ ಗೇರು ನಿಗಮದ ತೋಟದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಸಂತ ತೆರೇಸಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಮಹಾಸಭೆ

Suddi Udaya

ಯಕ್ಷಧ್ರುವ ಪಟ್ಣ ಫೌಂಡೇಶನ್ ಬೆಳ್ತಂಗಡಿ ಘಟಕದ ನೇತೃತ್ವ ಡಿ.2: ಉಜಿರೆ ರಥಬೀದಿಯಲ್ಲಿ ” ಯಕ್ಷ ಸಂಭ್ರಮ-2023″

Suddi Udaya
error: Content is protected !!