September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಉದ್ಯೋಗ ಪ್ರೇರಣಾ ಶಿಬಿರ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬೆಳ್ತಂಗಡಿ ವತಿಯಿಂದ ಸ್ವಉದ್ಯೋಗ ಪ್ರೇರಣಾ ಶಿಬಿರವು ಅರಸಿನಮಕ್ಕಿಯ ಕುಲಾಲ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮರಾಜ್ ಅಡ್ಕಡಿ ಹಾಗೂ ಸಭಾಧ್ಯಕ್ಷೆಯನ್ನು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಧೀರ್ ವಹಿಸಿದರು.


ಮುಖ್ಯ ಅತಿಥಿಗಳಾಗಿ ತಾಲೂಕಿನ ಜನ ಜಾಗೃತಿ ಸದಸ್ಯೆ ಮಂಜುಳ ಕಾರಂತ್, ತಾಲೂಕು ಜನ ಜಾಗೃತಿ ಸದಸ್ಯರು ಚೆನ್ನಪ್ಪ ಗೌಡ , ರುಡ್ ಸೆಟ್ ತರಬೇತಿ ಸಂಸ್ಥೆಯ ಉಪನ್ಯಾಸಕ ಜೇಮ್ಸ್ ಅಬ್ರಾಮ್, ಅರಸಿನಮಕ್ಕಿ ವಲಯದ ಮೇಲ್ವಿಚಾರಕಿ ಶಶಿಕಲಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಯೋಜನೆಯ ಮಹತ್ವ ಮತ್ತು ಒಬ್ಬ ವ್ಯಕ್ತಿ ಸ್ವಾವಲಂಬಿಯಾಗಿ ಬೆಳೆಯಲು ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಹೆಮ್ಮೆಯಿಂದ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು ಹಾಗೆ ರುಡ್ ಸೆಟ್ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಜೇಮ್ಸ್ ಅಬ್ರಾಮ್ ಇವರು ಸ್ವಉದ್ಯೋಗದ ಬಗ್ಗೆ ಜನರನ್ನು ಪ್ರೇರೇಪಿಸುವಲ್ಲಿ ಮತ್ತು ಸ್ವದ್ಯೋಗವನ್ನು ಮಾಡಲು ಬೇಕಾದ ತರಬೇತಿಗಳ ಬಗ್ಗೆ ಸಹಕಾರವನ್ನು ನೀಡುವುದರ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವುದರ ಬಗ್ಗೆ ತಿಳಿಸಿದರು.

Related posts

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಭಾಗವತ ಸಪ್ತಾಹ’

Suddi Udaya

ಸುಲ್ಕೇರಿಮೊಗ್ರು: ದರ್ಖಾಸು ಐರಿನ್ ಡಿಸೋಜರವರ ಮನೆ ಹಿಂಬದಿ ಗುಡ್ಡ ಕುಸಿತ: ಗ್ರಾ.ಪಂ. ಅಧಿಕಾರಿಗಳ ಭೇಟಿ

Suddi Udaya

ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭ

Suddi Udaya

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅ.8 ರಿಂದ ಅ.24 ರವರೆಗೆ ದಸರಾ ರಜೆ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಲಾಯಿಲ ಸೈಂಟ್ ಮೇರಿಸ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಸುಮೇದ ಕೃಷ್ಣ ದ್ವಿತೀಯ ಸ್ಥಾನ

Suddi Udaya

ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡಮಾಡಲ್ಪಡುವ ಹವ್ಯಕ ವೇದರತ್ನ ಪ್ರಶಸ್ತಿಗೆ ವೇದಮೂರ್ತಿ ವೆಂಕಟೇಶ ಶಾಸ್ತ್ರಿಯವರು ಆಯ್ಕೆ

Suddi Udaya
error: Content is protected !!