September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

ಅರಸಿನಮಕ್ಕಿ: ಸರಕಾರಿ ಪ್ರೌಢಶಾಲೆ ಅರಸಿನಮಕ್ಕಿಯಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಶಶಿಧರ್ ಜೆ ಎಸ್ (ಗಣಿತ ಶಿಕ್ಷಕರು) ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಶಾಲೆಗೆ ವರ್ಗಾವಣೆಗೊಂಡಿರುತ್ತಾರೆ ಹಾಗೆಯೇ ಇನ್ನೋರ್ವ ಶಿಕ್ಷಕರಾದ ಶಶಿಕಾಂತ್ (ವಿಜ್ಞಾನ ಶಿಕ್ಷಕರು) ರವರು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ಶಾಲೆಗೆ ವರ್ಗಾವಣೆಗೊಂಡಿರುತ್ತಾರೆ.

ವರ್ಗಾವಣೆಗೊಂಡಿರುವ ಶಿಕ್ಷಕರಿಗೆ ಎಸ್ ಡಿ ಎಂ ಸಿ, ಪೋಷಕ ವೃಂದ ಮತ್ತು ಶಾಲಾ ವತಿಯಿಂದ ಬೀಳ್ಕೊಡುಗೆ ಸಮಾರಂಭ ಅರಸಿನಮಕ್ಕಿ ಪ್ರೌಢಶಾಲೆಯಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ತನಿಯಪ್ಪ ಗೌಡರು ವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರ ಹಾಗೂ ಎಸ್ ಡಿ ಎಂ ಸಿ ಸದಸ್ಯರು ವರ್ಗಾವಣೆಗೊಂಡ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಟ್ಟರು.


ಕಾರ್ಯಕ್ರಮವನ್ನು ಶ್ರೀಮತಿ ಸೇವ್ರಿನ್ ಮಾರ್ಟಿಸ್ ನಿರೂಪಿಸಿ, ಶ್ರೀಮತಿ ಮೀನಾಕ್ಷಿ ಸ್ವಾಗತಿಸಿದರು. ಶ್ರೀಮತಿ ಮಂಜುಳಾ ವಂದಿಸಿದರು.

Related posts

ನಿಡ್ಲೆ: ಗೌಡರ ಯಾನೆ ಒಕ್ಕಲಿಗರ ಸಂಘ ಪಿಲಿಕಜೆ ಬೈಲುವಾರು ಸಮಿತಿಯ ಮಾಸಿಕ ಸಭೆ , ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಪುಸ್ತಕ- ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ, ತರಬೇತಿ ಕಾರ್ಯಾಗಾರ – ಶೈಕ್ಷಣಿಕ ಸಾಧ‌ನೆಗೆ ಇಚ್ಚಾಶಕ್ತಿ ಮತ್ತು ಬದ್ದತೆ ಮುಖ್ಯ: ದಾಸಪ್ಪ ಪೂಜಾರಿ

Suddi Udaya

ಬಜಿರೆ: ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು ಶ್ರೀರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ, ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಛಾವಣಿ ಲೋಕಾರ್ಪಣೆ

Suddi Udaya

ಉಜಿರೆ ಮಹಾಶಕ್ತಿ ಕೇಂದ್ರ ಹಾಗೂ ಯುವಮೋರ್ಚಾ ಬೆಳ್ತಂಗಡಿ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ 

Suddi Udaya

ಸ್ವ-ಉದ್ಯೋಗ ಅಥವಾ ಉದ್ಯೋಗ ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಹೆಗ್ಗಡೆಯವರಿಗೆ ‘ಕರ್ನಾಟಕ ಪರಿವರ್ತನೆಯ ರೂವಾರಿ’ ಗೌರವ ಪ್ರಶಸ್ತಿ: ಸಿರಿ ಸಿಬ್ಬಂದಿಗಳಿಂದ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!