April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷ ಆನಂದ ಅಡಿಲು ರವರಿಗೆ ಸನ್ಮಾನ ಮತ್ತು ಪಿಡಿಒ ಸವಿತಾ ರವರಿಗೆ ಬೀಳ್ಕೊಡುಗೆ

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಳೆದ ಐದು ವರ್ಷಗಳಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಕು. ಸವಿತಾರವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಕಳೆದ ಎರಡೂವರೆ ವರ್ಷಗಳ ಅವಧಿಗೆ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಆನಂದ ಅಡಿಲು ರವರಿಗೆ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾಲತಾ, ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮಾ, ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಪ್ರಮೋದ್ ಬೆದ್ರಬೆಟ್ಟು, ಸತೀಶ್ ಚೌಕದಕಟ್ಟೆ, ಶ್ರೀಮತಿ ಸುಮಿತ್ರಾ, ಶ್ರೀಮತಿ ಸೌಮ್ಯ, ಶ್ರೀಮತಿ ಜಯಂತಿ, ವೀರಪ್ಪ ಮೊಯ್ಲಿ, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಶ್ಮಿ ರವರು ಸ್ವಾಗತಿಸಿ ವಂದಿಸಿದರು.

Related posts

ತಾಲೂಕು ಮರಾಟಿ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ನಾಯ್ಕ್ ನಿಧನ

Suddi Udaya

ಬಂದಾರು: ಬಿಜೆಪಿ ಕಾರ್ಯಕರ್ತರಿಂದ ಬಿರುಸಿನ ಮತಪ್ರಚಾರ

Suddi Udaya

ಬಳಂಜ: ಬೊಳ್ಳಾಜೆ- ಡೆಂಜೋಲಿ ರಸ್ತೆ ಮದ್ಯೆ ವಿದ್ಯುತ್ ತಂತಿ ಮೇಲೆ ಬಿದ್ದ ಮರ

Suddi Udaya

ಉಜಿರೆಯ ಡಾ. ಟಿ. ಕೃಷ್ಣಮೂರ್ತಿ ರವರಿಗೆ ಹವ್ಯಕ ಶಿಕ್ಷಣ ರತ್ನ ಪ್ರಶಸ್ತಿ

Suddi Udaya

ಓಡಿಲ್ನಾಳ: ಕೋರ್ಯಾರು ರಸ್ತೆಯಲ್ಲಿ ವಿದ್ಯುತ್ ಲೈನ್ ಗೆ ಬಿದ್ದ ಮರ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ನ ವತಿಯಿಂದ ಮಾನವ ಸಂಬಂಧ ತರಬೇತಿ ಕಾರ್ಯಕ್ರಮ

Suddi Udaya
error: Content is protected !!