September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾವೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ನಾವೂರು : ಸರಕಾರಿ ಪ್ರೌಢ ಶಾಲೆ ನಾವೂರು ಇಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.


ಶಾಲಾ ಮುಖ್ಯಶಿಕ್ಷಕ ರಾಜೇಂದ್ರ ಭಟ್ ರವರ ಮುಂದಾಳತ್ವದಲ್ಲಿ ಶಾಲೆಯ ಎಲ್ಲಶಿಕ್ಷಕರ ಸಹಯೋಗದೊಂದಿಗೆ ಎಸ್. ಡಿ.ಎಂ. ಸಿ ಉಪಾಧ್ಯಕ್ಷ ಉಮೇಶ್ ಪ್ರಭು ಹಡೀಲ್ ರವರ ಉಪಸ್ಥಿತಿಯಲ್ಲಿ ನಾವೂರಿನ ಪ್ರಸಿದ್ಧ ವೈದ್ಯ ಡಾ. ಪ್ರದೀಪ್ ರವರು ದ್ವಜಾರೋಹಣ ಮಾಡಿ ಸ್ವಾತಂತ್ರ್ಯ ಸಂದೇಶ ನೀಡಿದರು.

ಮುಖ್ಯ ಅತಿಥಿಗಳಾಗಿ ಗ್ರಾಮಪಂಚಾಯತ್ ಸದಸ್ಯರು, ಎಸ್ಡಿಎಂಸಿ ಸದಸ್ಯರು, ಪೋಷಕರು, ಆಟೋ ಮಾಲಕ ಚಾಲಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಪುರಮೆರವಣಿಗೆಯಲ್ಲಿ ಎಲ್ಲ ದೇಶಭಕ್ತ ಬಂಧುಗಳು ವಿದ್ಯಾರ್ಥಿಗಳೊಂದಿಗೆ ಘೋಷವಾಕ್ಯ ಕೂಗುತ್ತ ಮುನ್ನಡೆದರು. ನಂತರ ಮಕ್ಕಳ ಸಾಂಸ್ಕತಿಕ ಕಾರ್ಯಕ್ರಮ ನೆರವೇರಿತು.


ಶ್ರೀಮತಿ ಭವ್ಯ ನಿರೂಪಿಸಿ, ಶ್ರೀಮತಿ ನಿಖಿಲಾ ಸ್ವಾಗತಿಸಿ, ಶ್ರೀಮತಿ ಜಯಶ್ರೀ ವಂದಿಸಿದರು. ಶಿಕ್ಷಕಕಿಯರಾದ ಶ್ರೀಮತಿ ಪುಷ್ಪ, ಶ್ರೀಮತಿ ವಿನೋದ ಮತ್ತು ಶ್ರೀಮತಿ ಮೀನ ರವರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು .

Related posts

ಪಡಂಗಡಿ:ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕರೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ

Suddi Udaya

ಶಾಸಕ ಹರೀಶ್ ಪೂಂಜರವರನ್ನು ಭೇಟಿ ಮಾಡಿದ ಬಳಂಜ ಶಾಲಾ ಅಮೃತ ಮಹೋತ್ಸವ ಆಚರಣಾ ಸಮಿತಿ

Suddi Udaya

ಮಂಡ್ಯದಲ್ಲಿ ನಡೆದ ಕೊಲೆ ಪ್ರಕರಣ: ಆರೋಪಿ ಜಯಚಂದ್ರ ಬಂಧನ

Suddi Udaya

ಕಕ್ಕಿಂಜೆಯ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ ಪ್ರಕರಣ: ನಾಲ್ವರನ್ನು ಬಂಧಿಸಿದ ಧಮ೯ಸ್ಥಳ ಪೊಲೀಸರು

Suddi Udaya

ಧರ್ಮಸ್ಥಳ ಮಾನ್ವಿಶ್ರೀ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಉಜಿರೆ: ರಾಜಗೃಹ ನಿವಾಸಿ ರಾಮಚಂದ್ರ ಭಟ್ ತಂತ್ರಿ ನಿಧನ

Suddi Udaya
error: Content is protected !!