25.7 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕ ಪೊಲೀಸ್ ವಶ: ಚಿಕ್ಕಮಗಳೂರು ದೊನಿಗದ್ದೆ ನಿವಾಸಿ ಸಂತೋಷ್ ಬಂಧನ

ವೇಣೂರು: ಗಾಂಜಾ ಸೇವಿಸಿ ಅಡ್ಡಾದಿಡ್ಡಿ ಕಾರು ಚಲಾಯಿಸುತ್ತಿದ್ದ ಯುವಕನನ್ನು ಬಂಧಿಸಿರುವ ಘಟನೆ ಸೆ.1ರಂದು ನಿಟ್ಟಡೆ ಗ್ರಾಮದ ಕುಂಭಶ್ರೀ ಬಸ್ ನಿಲ್ದಾಣದ ಬಳಿ ನಡೆದಿದೆ. ಬಂಧಿತ ಆರೋಪಿ ಚಿಕ್ಕಮಗಳೂರು ನಿವಾಸಿ ಸಂತೋಷ್ (23ವ) ಎಂದು ಗುರುತಿಸಲಾಗಿದೆ.

ಸಂತೋಷ್ ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸುತ್ತಿದ್ದ. ವೇಣೂರು ಪೊಲೀಸ್ ಠಾಣಾ ಪೊಲೀಸರು ತಡೆದು ನಿಲ್ಲಿಸಿದಾಗ ಆತನು ಅಮಲಿನ ನಶೆಯಲ್ಲಿದ್ದಂತೆ ಕಂಡು ಬಂದಿದ್ದು, ಆತನನ್ನು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವೈದ್ಯಾಧಿಕಾರಿಗಳಿಂದ ತಪಾಸಣೆಗೆ ಒಳಪಡಿಸಿದಾಗ ನಿಷೇದಿತ ವಸ್ತು ಗಾಂಜಾವನ್ನುಸೇವಿಸಿರುವುದು ದೃಢಪಟ್ಟಿದ್ದು, ಆರೋಪಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಇವರ ಚೊಚ್ಚಲ ಕವನ ಸಂಕಲನ “ಮಂಜರಿ” ಬಿಡುಗಡೆ

Suddi Udaya

ನೆರಿಯ: ಅಣಿಯೂರು ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ: ಕಾಟಾಜೆ ರಸ್ತೆಗೆ ನೀರು ಪ್ರವೇಶಿಸಿ ಮುಳುಗಿದ ಕಾರು

Suddi Udaya

ನಾಲ್ಕೂರು: ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಕುರೆಲ್ಯ ನಿಧನ

Suddi Udaya

ಉಜಿರೆ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರಶಸ್ತಿಯ ಗೌರವ

Suddi Udaya

ತರ್ಬೀಯತುಲ್ ಇಸ್ಲಾಂ ದಮ್ಮಾಂ ಕರ್ನಾಟಕ ಮದ್ರಸದ ಮಿಹ್ರಜಾನುಲ್ ಬಿದಾಯ ವರ್ಷಾರಂಭ ಅಧ್ಯಯನ ಶಿಬಿರ

Suddi Udaya
error: Content is protected !!