ಮಡಂತ್ಯಾರು: ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ಮಡಂತ್ಯಾರು ಇದರ ವತಿಯಿಂದ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆ.೦7ರಂದು ಮಡಂತ್ಯಾರು ಗಣಪತಿ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷರಾದ ಬಿ. ಜಯಂತ್ ಶೆಟ್ಟಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಗ್ರಾ.ಪಂ ಅಧ್ಯಕ್ಷೆ ರೂಪ ಎನ್.ಎಸ್, ಬೆಳ್ತಂಗಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ವಿಸ್ತರಣಾಧಿಕಾರಿ ಸುರೇಂದ್ರ ಎಸ್ ಭಾಗವಹಿಸಲಿರುವರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ. ಮಂಗಳೂರು ಕುದ್ರೋಳಿ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರರವರು ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಪಾರೆಂಕಿಯ ಪ್ರಧಾನ ಅರ್ಚಕರಾದ ಟಿ.ವಿ ಶ್ರೀಧರ ರಾವ್, ಬೆಸ್ಟ್ ಫೌಂಡೇಶನ್‌ನ ಅಧ್ಯಕ್ಷ ರಕ್ಷಿತ್ ಶಿವರಾಂ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್.ಎಂ ಪುಂಜಾಲಕಟ್ಟೆ, ತಣ್ಣೀರುಪಂತ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಅಧ್ಯಕ್ಷ ಭರತ್ ಕುಮಾರ್ ಕೇರಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಮಂಜುನಾಥ ಗೌಡ, ಬೆಳ್ತಂಗಡಿ ತಾಲೂಕಿನ ಉಪ ತಹಶೀಲ್ದಾರರು ಜಯ ಪ್ರವೀಣ್, ಬೈಲೊರ್ದು ನಾಟಿ ವೈದ್ಯ ರಾಧಾಕೃಷ್ಣ, ಉರಗ ಪ್ರೇಮಿ ಸ್ನೇಕ್ ಜೋಯಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮಕ್ಕಳಿಗೆ, ಯುವಕ ಯುವತಿಯರಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ ಹಾಗೂ ವಿಶೇಷವಾಗಿ ಸ್ಲೋ ಸೈಕಲ್ ಬ್ಯಾಲೆನ್ಸ್ ,ಶ್ರೀಕೃಷ್ಣ ವೇಷ ಸ್ಪರ್ಧೆ ಮಹಿಳೆಯರಿಗೆ ರಂಗೋಲಿ ಬಿಡಿಸುವ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ ಗಂಟೆ 3 ರಿಂದ ವೈಭವದ ಮೆರವಣಿಗೆ, ರಾತ್ರಿ ನೃತ್ಯ ಗಾಯನ ವೈವಿಧ್ಯ ನಡೆಯಲಿದೆ ಎಂದು ಗೌರವಾಧ್ಯಕ್ಷ ಬಿ.ಪದ್ಮನಾಭ ಸುವರ್ಣ, ಅಧ್ಯಕ್ಷ ಅಶೋಕ್ ಬಸವನಗುಡಿ ತಿಳಿಸಿದ್ದಾರೆ.