September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ: ಎಸ್.ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಉಜಿರೆ: ಎಸ್.ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆ.5 ರಂದು ವಿದ್ಯಾರ್ಥಿಗಳಿಂದ ಶಿಕ್ಷಕರಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆಯ ಮಹತ್ವ, ಗುರು ನಮನ ನೃತ್ಯ ಹಾಗೂ ಗುರುಗಳ ಕುರಿತು ಹಾಡನ್ನು ವಿದ್ಯಾರ್ಥಿಗಳಿಂದ ಹಾಡಲಾಯಿತು. ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ವಿವಿಧ ಆಟಗಳನ್ನು ಆಡಿಸಿ ವಿದ್ಯಾರ್ಥಿಗಳೇ ತಯಾರು ಮಾಡಿದ ಆಕರ್ಷಕ ಬಹುಮಾನಗಳನ್ನು ಶಿಕ್ಷಕರಿಗೆ ವಿತರಿಸಲಾಯಿತು.

ಶಿಕ್ಷಕಿ ಅಶ್ವಿತಾ ಮತ್ತು ಮಾಧುರ ಸಂಯೋಜಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮನಮೋಹನ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳಾದ ಸುಶಾಂತ್ ಮತ್ತು ನೇಹಾ ಬೀಡೆ ಕಾರ್ಯಕ್ರಮ ನಿರೂಪಿಸಿದರು.

Related posts

ರೋಟರಿ ಕ್ಲಬ್ ವತಿಯಿಂದ ಅಮೂಲ್ ಸಾವಯುವ ಗೊಬ್ಬರದ ಪ್ರಾತ್ಯಕ್ಷಿಕೆ

Suddi Udaya

ಕಣಿಯೂರು: ಯುವಕೇಸರಿ ತಂಡದ ವತಿಯಿಂದ ಧನಸಹಾಯ

Suddi Udaya

ಜೈನರಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಿರಿಯೂರಿನ ಶಾಸಕ ಡಿ. ಸುಧಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಿ: ನಿರಂಜನ್ ಜೈನ್ ಕುದ್ಯಾಡಿ‌

Suddi Udaya

ಕುಕ್ಕೇಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ನಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

Suddi Udaya

ಮದ್ದಡ್ಕ : ಮನೀಶ್ ಹೋಟೆಲ್ ಮಾಲಕ ರಮೇಶ್ ಪೂಜಾರಿ ನಿಧನ

Suddi Udaya
error: Content is protected !!