25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಸಂತ ಅಂತೋನಿ ಚರ್ಚ್ ನಲ್ಲಿ ಸಂಭ್ರಮದ ತೆನೆ ಹಬ್ಬ

ಉಜಿರೆ: ಸಂತ ಅಂತೋನಿ ಚರ್ಚ್ ನಲ್ಲಿ ಸಂಭ್ರಮದ ತೆನೆ ಹಬ್ಬವನ್ನು ಸೆ.8ರಂದು ಆಚರಿಸಲಾಯಿತು.

ಸಂಭ್ರಮದ ದಿವ್ಯ ಬಲಿ ಪೂಜೆಯನ್ನು ಉಜಿರೆ ದಯಾಳ್ ಬಾಗ್ ಆಶ್ರಮದ ಮುಖ್ಯ ಧರ್ಮಗುರು ವ.ಫಾ. ಫೆಡ್ರಿಕ್ ಬ್ಯಾಗ್ಸ್ ಅರ್ಪಿಸಿ ತೆನೆಯನ್ನು ಆಶೀರ್ವದಿಸಿ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ಜೇಮ್ಸ್ ಡಿಸೋಜಾ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವ.ಫಾ.ವಿಜಯ್ ಲೋಬೊ, ವ.ಫಾ.ವಲೇರಿಯನ್ ಸಿಕ್ವೆರಾ, ವ.ಫಾ.ಪ್ರದೀಪ್ ಪಿಂಟೊ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಪಾಲನಾ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು, ಸಹಕರಿಸಿದರು.

ಕನ್ಯಾ ಮರಿಯಮ್ಮ ಹುಟ್ಟು ಹಬ್ಬದ ಪ್ರಯುಕ್ತ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮರಿಯಮ್ಮಗೆ ಹೂ ಅರ್ಪಿಸಿದರು. ಬಳಿಕ ಪ್ರತಿಯೊಬ್ಬರ ಮನೆಗೂ ತೆನೆಯನ್ನು ವಿತರಿಸಲಾಯಿತು.

ಆಗಮಿಸಿದ ಭಕ್ತಾಧಿಗಳಿಗೆ ಕಬ್ಬು ವಿತರಿಸಿ, ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್ ಪ್ರಯೋಜಕತ್ವದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Related posts

ವೇಣೂರಿನ ನಡ್ತಿಕಲ್ ನಿವಾಸಿ ಕೆ. ಬಿ. ಅಬ್ದುಲ್ ಖಾದರ್ ನಿಧನ

Suddi Udaya

ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಸುರೇಶ್ ಪೂಜಾರಿ ಸೇವೆಯಿಂದ ನಿವೃತ್ತಿ

Suddi Udaya

ಹಿಂದೂ ಸಂರಕ್ಷಣಾ ಯಾತ್ರೆ ಬಗ್ಗೆ ಹಾಕಿದ ಎರಡು ಬ್ಯಾನರ್ ಹರಿದ ಕಿಡಿಗೇಡಿಗಳು

Suddi Udaya

ಬೆಳ್ತಂಗಡಿ: ನವೋದಯ ಸ್ವಸಹಾಯ ತಂಡದ ಪುರುಷ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಬೆಳಾಲು: ಶ್ರೀಮತಿ ಸುಲೋಚನಾ ಎಸ್. ಕೆರ್ಮುಣ್ಣಾಯ ನಿಧನ

Suddi Udaya

ಕಡಬದ ನವ ಜೀವನ ಸದಸ್ಯರಿಂದ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya
error: Content is protected !!