April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಣಕಜೆ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಧಾರ್ಮಿಕ ಸಭೆ

ಬೆಳ್ತಂಗಡಿ: ಸನಾತನ ಧರ್ಮ ಸೂರ್ಯ ಚಂದ್ರರಿರುವರೆಗೆ ಶಾಶ್ವತವಾಗಿ ಇರಲಿದೆ ಶ್ರೀಕೃಷ್ಣನ ಜೀವನಾದರ್ಶ ಮನಕುಲಕ್ಕೆ ಪಾಲನಯೋಗ್ಯವಾಗಿದ್ದು ತಾವೆಲ್ಲರೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಪರಮಾತ್ಮನ ಅನುಗ್ರಹ ನಮಗೆ ಸಿಗಲಿದೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ನಿವೃತ್ತ ಶಿಕ್ಷಕ ರಾಧಕೃಷ್ಣ ಅಡ್ಯಂತಾಯ ಹೇಳಿದರು.

ಅವರು ಸೆ 6 ರಂದು ಶ್ರೀ ಕೃಷ್ಣ ಭಜನಾ ಮಂದಿರ ಪಣಕಜೆ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಪಣಕಜೆ. ಶ್ರೀ ಕೃಷ್ಣ ಮಹಿಳಾ ಸಮಿತಿ ಪಣಕಜೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಸೋಣಂದೂರು, ವಿಶ್ವ ಹಿಂದೂ ಪರಿಷತ್ ಭಜರಂಗದಳ ಪಣಕಜೆ ಖಂಡ ಸಮಿತಿ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರಗಿದ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ‌ ಸಂಪತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಲಾಡಿ ಗ್ರಾಮ ಪಂ ಅಧ್ಯಕ್ಷ ಪುನಿತ್ ಕುಮಾರ್. ಪುತ್ತೂರು ಜಿಲ್ಲಾ ಭಜರಂಗದಳ ಸಂಯೋಜಕ ಭರತ್ ಕು‌ಮುಡೇಲು, ಮಂಗಳೂರು ಮೆಸ್ಕಾಂ ಮಾಜಿ ನಿರ್ಧಶಕ ಕಿಶೋರ್ ಕುಮಾರ್ ಪುತ್ತೂರು, ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ‌ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಉದ್ಯಮಿ  ಕಿರಣ್ ಕುಮಾರ್ ಹೊಕ್ಕಾಡಿಗೋಳಿ ಅರಂಬೋಡಿ ಅಗಮಿಸಿದ್ದರು.

ಮೂಡುಮನೆ ಶ್ರೀನಿವಾಸ ಅಮ್ಮುಣ್ಣಾಯ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಕ್ಕಳಿಗೆ ಸಾರ್ವಜನಿಕರಿಗೆ ವಿವಿಧ ಅಟೋಟ ಸ್ಪರ್ಧೆ ಮುದ್ದು ಕೃಷ್ಣ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಶ್ರೀ ಕೃಷ್ಣ ಭಜನಮಂದಿರದಲ್ಲಿ ಕೃಷ್ಣಾಷ್ಟಮಿಯಂದು ಉತ್ತಮ ಅಂಕ ಪಡೆದ ಅನ್ವಿತಾ.ವಿ. ಸಾಲ್ಯಾನ್ ಪಣಕಜೆ, ಪವನ್ ಪಾಲು ಮನೆ, ಅಭಿಷೇಕ್ ನಾಯಕ್ ಪಣಕಜೆ ಸನ್ಮಾನಿಸಲಾಯಿತು.

ಪದ್ಮನಾಭ ಶೆಟ್ಟಿ ಅರ್ಕಜೆ ಸ್ವಾಗತಿಸಿ, ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.  ಸಾಂಸ್ಕ್ರತಿಕ ಕಾರ್ಯಕ್ರಮ ನಮ್ಮ ಕುಡ್ಲ ಯಕ್ಷ ತೆಲಿಕೆ ಕಲಾವಿದರು ಕುಸಾಲ್ದ ಗುರಿಕಾರೆ ದಿನೇಶ್ ಕೋಡಪದವು ಸಾರತ್ಯದಲ್ಲಿ ಯಕ್ಷ ತೆಲಿಕೆ ಯಕ್ಷ ಹಾಸ್ಯ ವೈಭವ ಜರಗಿತು.  ಸಾಯಂಕಾಲ ಸ್ಥಳೀಯ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಿತು. ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಶ್ರೀಕಾಂತ ಶೆಟ್ಟಿ ಮುಂಡಾಡಿ, ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಬಿ ಶೆಟ್ಟಿ ಪೆರಂಗೋಡಿ, ಕಾರ್ಯದರ್ಶಿ ಸುದೀಪ್ ಕುಲಾಲ್ ಭಂಡಾರದಕೊಟ್ಯ, ಕೋಶಾಧಿಕಾರಿ ಅಭಿಲಾಷ್ ಆಚಾರ್ಯ ಪೊಮ್ಮಾಜೆ, ಶ್ರೀ ಕೃಷ್ಣ ಮಹಿಳಾ ಸಮಿತಿ ಅಧ್ಯಕ್ಷೆ ಅಶ್ವಿನಿ ನಾಯಕ್ ಪಣಕಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜೆನೆ ಸೇವಾ ಪ್ರತಿನಿಧಿ ಆನಂದ ಪೂಜಾರಿ ಬರಮೇಲು ಮತ್ತು ಪುಷ್ಪಾ ಕೃಷ್ಣನಗರ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. 

Related posts

ವಾಲಿಬಾಲ್ ಪಂದ್ಯಾಟ: ಬಂದಾರು ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ ಆಡಳಿತ ಮಂಡಳಿ ರಚನೆ: ಅಧ್ಯಕ್ಷರಾಗಿ ಯುವ ನಾಯಕ ಸಂತೋಷ್ ಪಿ ಕೋಟ್ಯಾನ್ ಬಳಂಜ ಆಯ್ಕೆ

Suddi Udaya

ಮಡಂತ್ಯಾರು ವಲಯದ ಬಂಟರ ಸಂಘದ ಕ್ರೀಡೋತ್ಸವ 2025

Suddi Udaya

ನೆರಿಯ: ಕುಡುಮಡ್ಕ ಸೌಗಂಧಿಕ ಮನೆಯ ನೀಲಮ್ಮ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನ: ಶ್ರೀ ಮಂ. ಅ.ಪ್ರೌ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಬೇಸಿಗೆ ಶಿಬಿರ ಯಶಸ್ವಿ ಸಂಪನ್ನ

Suddi Udaya
error: Content is protected !!