32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಂ| ಸಿ| ಟೆಸಿ ಮಾನುವೆಲ್ ಎಸ್ ಎಚ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ


ಬೆಳ್ತಂಗಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸೇಕ್ರೆಡ್ ಹಾರ್ಟ್ ಕೋಂಗ್ರಿಗೆಷನ್ ಸಿಸ್ಟೆರ್ ಟೆಸಿ ಮಾನುವೆಲ್ ಇವರ 2023-24ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸೆ 9 ರಂದು ಅನುದಾನಿತ ಶಾಲೆಗಳ ಕೇಂದ್ರ ಕಛೇರಿ ಶಿಕ್ಷಕರ ಸದನ ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರಧಾನ ಮಾಡಿದರು.


ಪ್ರಶಸ್ತಿ ಪುರಸ್ಕೃತ ಸಿಸ್ಟೆರ್ ಟೆಸಿ ಇವರನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಅತಿ ವಂ. ಬಿಷಪ್ ಲಾರೆನ್ಸ್ ಮುಕ್ಕುಯಿ, ಕರ್ನಾಟಕ ಕ್ಯಾಥೋಲಿಕ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಸೊಸೈಟಿ ಯ ಕಾರ್ಯದರ್ಶಿ ನೆಲ್ಯಾಡಿ ಅಲ್ಫೋನ್ಸ, ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿ ಮಾತ್ಯು, ಸೇಕ್ರೆಡ್ ಹಾರ್ಟ್ ಕೊಂಗ್ರಿಗೇಷನ್ ಇದರ ರೀಜಿನಲ್ ಸುಪಿರಿಯರ್ ವಂ.ಸಿ. ಲಿಸ್ ಮಾತ್ಯು, ಮುಖ್ಯ ಕೌನ್ಸಿಲ್ ಸದಸ್ಯರಾದ ವಂ. ಸಿ| ತೆರೆಸ್ ಕುರಿಯನ್, ವಂ.ಸಿ| ಸೌಮ್ಯ, ವಂ. ಸಿ| ಎಲ್ಸಿಲಿಟ್ ವಾಯಕ್ಕಾಲ ಸಾಧನೆಗೆ ಅಭಿನಂದನೆಗಳು ಸಲ್ಲಿಸಿದ್ದಾರೆ

ಇವರು ಬೆಳ್ತಂಗಡಿ ತಾಲೂಕಿನ ತೋಟತ್ತಾಡಿಯ ಇಮ್ಮಾ ನುವೆಲ್ ಮತ್ತು ತ್ರೆಸಿಯಮ್ಮ ಇವರ ಸುಪುತ್ರಿ ಯಾಗಿದ್ದು ಕೊಡಗಿನ ಹೊಸ ಕೋಟೆ ದೀಪ್ತಿ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಯಲ್ಲಿದ್ದಾರೆ.

Related posts

ಕಳೆಂಜ: ಅಕ್ರಮ ಗೋ ಸಾಗಾಟ: ಇಬ್ಬರ ಬಂಧನ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಪರವಾನಿಗೆ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ನಾಗ ವಿ ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭ

Suddi Udaya

ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಉಜಿರೆಯಲ್ಲಿ ಯಕ್ಷ ಸಂಭ್ರಮ

Suddi Udaya

ಇಂದಬೆಟ್ಟು: ದೇವನಾರಿ ನಿವಾಸಿ ರಝಾಕ್ ನಿಧನ

Suddi Udaya

ನಿಡ್ಲೆ: ನೆಡಿಲು ಪರಿಸರದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ ; ಬಾಳೆಗಿಡ, ಅಡಿಕೆ ಗಿಡಗಳಿಗೆ ಹಾನಿ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್

Suddi Udaya
error: Content is protected !!